ದೇಶಕ್ಕೆ ಅತ್ಯುತ್ತಮ ನಾಯಕನಾದರೂ.. ಸರಳತೆ, ಪ್ರೀತಿ, ವಿಶ್ವಾಸದಲ್ಲಿ ನಿಜವಾದ ಸಾಮ್ರಾಟ “ನಮೋ”!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಒಡಿಶಾದಲ್ಲಿ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ವೇದಿಕೆಯಲ್ಲಿ ಮಹಿಳೆಯೊಬ್ಬರಿಗೆ ಮಂಡಿಯೂರಿ ನಮಸ್ಕರಿಸಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಈಗ ಈ ಮಹಿಳೆ ಯಾರು ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಈ ಮಹಿಳೆಯ ಹೆಸರು ಕಮಲಾ ಮಹಾರಾಣಾ. ಕಮಲಾ ಅವರು ತ್ಯಾಜ್ಯ ವಸ್ತುಗಳಿಂದ ವಿವಿಧ ವಿಶಿಷ್ಟ ವಸ್ತುಗಳನ್ನು ರಚಿಸಲು ಹೆಸರುವಾಸಿಯಾಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನಿನ್ನೆ ಚುನಾವಣಾ ರ್ಯಾಲಿ ನಡೆಸಲು ಕೇಂದ್ರಪಾರಾಕ್ಕೆ ತೆರಳಿದ್ದರು. ಇಲ್ಲಿ ಅವರು ಕಮಲಾ ಮಹಾರಾಣಾರನ್ನು ಭೇಟಿಯಾದರು. ಕಮಲಾ ಅವರು ಸ್ವ-ಸಹಾಯ ಗುಂಪಿನ ಭಾಗವಾಗಿದ್ದಾರೆ. ಮತ್ತು ‘ವೇಸ್ಟ್ ಟು ವೆಲ್ತ್’ ಜೊತೆಗೆ ಮಹಿಳಾ ಸಬಲೀಕರಣದಲ್ಲಿ ಕೆಲಸ ಮಾಡುತ್ತಾರೆ.

ಕಳೆದ ವರ್ಷ ಪ್ರಧಾನಿ ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರಮದಲ್ಲೂ ಅವರನ್ನು ಉಲ್ಲೇಖಿಸಲಾಗಿತ್ತು. ಇತ್ತೀಚೆಗಷ್ಟೇ ಕಮಲಾ ಅವರು ಬಟ್ಟೆಗಳಿಂದ ತಯಾರಿಸಿದ ರಾಖಿಯನ್ನು ಪ್ರಧಾನಿ ಮೋದಿಯವರಿಗೆ ಕಳುಹಿಸಿದ್ದರು.

ಕಮಲಾ ಮಹಾರಾಣಾ ಒಡಿಶಾದ ಕೇಂದ್ರಪಾರಾ ಮೂಲದ 63 ವರ್ಷದ ಮಹಿಳೆ. ಕಮಲಾ ಅವರು ಮಹಿಳಾ ಸ್ವಸಹಾಯ ಗುಂಪು (ಎಸ್‌ಎಚ್‌ಜಿ) ನಡೆಸುತ್ತಿದ್ದಾರೆ. ಬಳಸಿದ ತ್ಯಾಜ್ಯ ಹಾಲಿನ ಚೀಲಗಳು ಮತ್ತು ಇತರ ಪ್ಲಾಸ್ಟಿಕ್ ವಸ್ತುಗಳನ್ನು ಮರುಬಳಕೆ ಮಾಡುವ ಮೂಲಕ ಗೃಹೋಪಯೋಗಿ ವಸ್ತುಗಳನ್ನು ಉತ್ಪಾದಿಸುತ್ತಾರೆ.

ಪ್ರಧಾನಿ ಮೋದಿ ಕಳೆದ ವರ್ಷ ಫೆಬ್ರವರಿ 26 ರಂದು, 98 ನೇ ಆವೃತ್ತಿಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಕಮಲಾ ಅವರ ತ್ಯಾಜ್ಯದಿಂದ ಹಣ ಮಾಡುವ ಉಪಕ್ರಮವನ್ನು ಪ್ರಸ್ತಾಪಿಸಿದ್ದರು. ಕಾರ್ಯಕ್ರಮದ ವೇಳೆ ಕಮಲಾ ಅವರನ್ನು ತಮ್ಮ ಸಹೋದರಿ ಎಂದೂ ಮೋದಿ ಕರೆದಿದ್ದರು. ಒಡಿಶಾದಲ್ಲಿ ಕಮಲಾ ಮೋದಿಯವರನ್ನು ಭೇಟಿಯಾಗಿ ಅವರ ಕಾಲಿಗೆ ನಮಸ್ಕರಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಮೋದಿ ಕೂಡ ಆ ಮಹಿಳೆ ಕಾಲಿಗೆ ನಮಸ್ಕರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!