Tuesday, March 28, 2023

Latest Posts

INTRESTING | ಅಂತೂ ನಿರ್ಮಾಣವಾಯ್ತು ಬೆಂಕಿಕಡ್ಡಿಗಳ ಐಫೆಲ್ ಟವರ್, 50 ವರ್ಷದ ಪರಿಶ್ರಮ ಅಂದ್ರೆ ಸುಮ್ನೇನಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯಾವುದೇ ವಿಷಯವನ್ನು ಒಂದೆರಡು ಬಾರಿ ಟ್ರೈ ಮಾಡಿ ಆಗೋದಿಲ್ಲ ಎಂದು ಬಿಡೋ ಮಧ್ಯೆ ಇಲ್ಲೊಂದು ಪರಿಶ್ರಮದ ಕಥೆ ಇದೆ ನೋಡಿ.. ಉತ್ತರಪ್ರದೇಶದ ಸುರೇಂದ್ರ ಜೈನ್ ಅವರು ನಿರಂತರ 50 ವರ್ಷ ಮಾಡಿದ್ದನ್ನೇ ಮಾಡಿ, ಬೇಸರವಿಲ್ಲದಂತೆ ತಮ್ಮ ಗುರಿಯನ್ನು ಮುಟ್ಟಿದ್ದಾರೆ.

ಸುರೇಂದ್ರ ಅವರು 75 ಸಾವಿರ ಬೆಂಕಿಕಡ್ಡಿಗಳನ್ನು ಬಳಸಿ ಐದು ಅಡಿ ಎತ್ತರದ ಐಫೆಲ್ ಟವರ್ ಪ್ರತಿಕೃತಿ ನಿರ್ಮಾಣ ಮಾಡಿ ದಾಖಲೆ ಬರೆದಿದ್ದಾರೆ. ಐಫೆಲ್ ಟವರ್‌ನ್ನು ಚಿಕ್ಕ ವಯಸ್ಸಿನಿಂದಲೂ ಇಷ್ಟಪಡುತ್ತಿದ್ದ ಸುರೇಂದ್ರ ಅವರು ಐಫೆಲ್ ಟವರ್ ನೋಡಿ ಬಂದಿದ್ದರು. ಸಂಪೂರ್ಣ ಅಧ್ಯಯನ ಮಾಡಿದ್ದರು.

ತದನಂತರ ಒಂದು ದಶಕ ಸಮಯದಲ್ಲಿ ಅಧ್ಯಯನ ನಡೆಸಿ, ಪ್ರಯತ್ನ ಮಾಡಿ ಗೆದ್ದಿದ್ದಾರೆ. ನನ್ನಮ್ಮ ವಿಭಿನ್ನವಾಗಿ ಏನಾದ್ರೂ ಮಾಡು ಎನ್ನುತ್ತಿದ್ದರು ಅದನ್ನೇ ಮಾಡಿದ್ದೇನೆ ಎಂದು ಸುರೇಂದ್ರ ಹೇಳುತ್ತಾರೆ.

ಬೆಂಕಿಕಡ್ಡಿಗಳನ್ನು ಜೋಡಿಸೋದಕ್ಕೆ ಕೈಗಳ ಹಿಡಿತ ಏಕಾಗ್ರತೆ ಪ್ರಮುಖವಾದ್ದು, ಈ ಸವಾಲಿನ ಕಾರ್ಯ ಮಾಡಿದ ಸುರೇಂದ್ರ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!