ಸಾಮಾಗ್ರಿಗಳು
ಈರುಳ್ಳಿ
ಟೊಮ್ಯಾಟೊ
ಕಾಯಿ
ಹಸಿಮೆಣಸು
ಬೆಳ್ಳುಳ್ಳಿ
ಕೊತ್ತಂಬರಿ ಸೊಪ್ಪು
ಸಾಂಬಾರ್ ಪುಡಿ
ಎಣ್ಣೆ
ಸಾಸಿವೆ
ಕಡ್ಲೆಬೇಳೆ
ಬೆಲ್ಲ
ಹುಣಸೆಹುಳಿ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಕರಿಬೇವು, ಜೀರಿಗೆ ಈರುಳ್ಳಿ ಹಾಕಿ ಬಾಡಿಸಿಕೊಳ್ಳಿ
ನಂತರ ಇದಕ್ಕೆ ಟೊಮ್ಯಾಟೊ ಹಾಕಿ ಮಿಕ್ಸ್ ಮಾಡಿ, ಸ್ವಲ್ಪ ಮೆತ್ತಗಾದ ನಂತರ ಹಾಗಲಕಾಯಿ ಹಾಕಿ
ಉಪ್ಪು ಹಾಕಿ ಹಾಗಲಕಾಯಿ ಬೇಯಲು ಬಿಡಿ
ನಂತರ ಮಿಕ್ಸಿ ಜಾರ್‌ಗೆ ಕಾಯಿ, ಹಸಿಮೆಣಸು, ಬೆಳ್ಳುಳ್ಳಿ, ಸಾಂಬಾರ್ ಪುಡಿ ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ರುಬ್ಬಿ
ಈ ಮಸಾಲಾ ಹಾಗಲಕಾಯಿಗೆ ಹಾಕಿ, ಹುಣಸೆಹುಳಿ ಹಾಕಿ ಡ್ರೈ ಆಗುವವರೆಗೂ ಬಾಡಿಸಬಹುದು, ಅಥವಾ ಗ್ರೇವಿಯಂತೆಯೇ ತಿನ್ನಬಹುದು.



