ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಸೈಫ್ ಅಲಿ ಖಾನ್ ಮೇಲೆ ಚೂರಿ ಇರಿತವಾಗಿದ್ದು, ಈ ಬಗ್ಗೆ ನಟಿ ಕರೀನಾ ಕಪೂರ್ ಖಾನ್ ರಿಯಾಕ್ಷನ್ ನೀಡಿದ್ದಾರೆ.
ಸೈಫ್ ಕುತ್ತಿಗೆ ಬೆನ್ನಿಗೆ ಆಳವಾದ ಗಾಯ ಆಗಿದೆ. ನಮ್ಮ ಮನೆಯಲ್ಲಿ ಎಷ್ಟೋ ಕಡೆ ಹಾಗೆ ಕಾಣುವಂತೆ ಬಂಗಾರದ ಒಡವೆಗಳು ಇವೆ. ಆದರೆ ಅದನ್ನು ದರೋಡೆಕೋರರು ಮುಟ್ಟೂ ಇಲ್ಲ. ಹೀಗಾಗಿ ಇವರು ಯಾರು ಎನ್ನುವ ಪ್ರಶ್ನೆ ಎದುರಾಗಿದೆ ಎಂದಿದ್ದಾರೆ.
ಹಂತಕ ಯಾವುದೇ ಕ್ರಿಮಿನಲ್ ಗ್ಯಾಂಗ್ ನೊಂದಿಗೆ ಸಂಪರ್ಕ ಹೊಂದಿದಂತೆ ಕಂಡುಬರುತ್ತಿಲ್ಲ. ಬಹುಶ: ಯಾರ ಮನೆ ಎಂದು ತಿಳಿಯದೇ ಸೈಪ್ ಅಲಿಖಾನ್ ಮನೆಗೆ ನುಗ್ಗಿರಬಹುದು. ಆತನಕ್ಕಾಗಿ ಬಂಧನಕ್ಕಾಗಿ 30 ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಸಿಟಿವಿಯಲ್ಲಿ ಆಗಂತುಕನ ರೀತಿಯಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ಕಾರ್ಪೆಂಟರ್ ಒಬ್ಬರನ್ನು ಬಾಂದ್ರಾ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿ, ಬಳಿಕ ಬಿಡುಗಡೆ ಮಾಡಲಾಗಿದೆ. ಆ ವ್ಯಕ್ತಿಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ, ಇಲ್ಲಿಯವರೆಗೂ ಯಾವ ವ್ಯಕ್ತಿಯನ್ನು ಬಂಧಿಸಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಖಚಿತಪಡಿಸಿದ್ದಾರೆ.