ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಇಸ್ರೇಲ್ ರಾಯಭಾರ ಕಚೇರಿಗಳು ಸುರಕ್ಷಿತವಲ್ಲ ಎಂದು ಇರಾನ್‌ನ ಅತ್ಯುನ್ನತ ನಾಯಕ ಅಯತುಲ್ಲಾ ಅಲಿ ಖಮೇನಿ ಹಿರಿಯ ಸಲಹೆಗಾರ ಯಾಹ್ಯಾ ರಹೀಂ ಸಫಾವಿ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ವರದಿ ಮಾಡಿರುವ ಐಎಸ್‌ಎನ್‌ಎ ಸುದ್ದಿಸಂಸ್ಥೆ, ಡಮಾಸ್ಕಸ್‌ನ ತನ್ನ ರಾಯಭಾರ ಕಚೇರಿ ಮೇಲೆ ಇಸ್ರೇಲ್ ದಾಳಿ ನಡೆಸಿ, ಕಾನ್ಸುಲರ್ ಅನೆಕ್ಸ್ ನೆಲಸಮಗೊಳಿಸಿದೆ ಎಂದು ಇರಾನ್ ಆರೋಪಿಸಿರುವ ಬೆನ್ನಿಗೇ ಈ ಹೇಳಿಕೆ ನೀಡಿದೆ ಎಂದು ಹೇಳಿದೆ.
ದಾಳಿಗೆ ನಮ್ಮ ಸೇನಾಪಡೆಗಳು ಸಿದ್ಧವಿದ್ದಾರೆ. ಆದರೆ ಈ ದಾಳಿ ಹೇಗಿರುತ್ತವೆ ಎಂಬುದನ್ನು ನೀವು ಕಾದು ನೋಡಬೇಕು ಎಮದಿರು ಯಹ್ಯಾ, ಕ್ರೂರ ಇಸ್ರೇಲನ್ನು ಎದುರಿಸುವುದು ಶಾಸನಬದ್ಧ ಹಾಗೂ ನ್ಯಾಯ ಸಮ್ಮತ ಹಕ್ಕು ಎಂದಿದ್ದಾರೆ. ಇಸ್ರೇಲ್ ದಾಳಿಯಿಂದ ಇಸ್ಲಾಮಿಕ್ ರೆವುಲ್ಯುಷನರಿ ಗಾರ್ಡ್ ಕಾರ್ಪ್ಸ್‌ನ ಏಳು ಮಂದಿ ಸಿಬ್ಬಂದಿ ಹಾಗೂ ಇಬ್ಬರು ನಾಗರಿಕರು ಮೃತಪಟ್ಟಿದ್ದರು. ಇದಕ್ಕೆ ಸೇಡು ತೀರಿಸಿಕೊಳ್ಳುವುದಾಗಿ ಟೆಹ್ರಾನ್ ಶಪಥ ಮಾಡಿದೆ ಎಂದೂ ವರದಿ ಹೇಳಿದೆ.
ಈ ನಡುವೆ ಇರಾನ್‌ನ ಈ ಹೇಳಿಕೆಗೆ ಇಸ್ರೇಲ್ ಯಾವುದೇ ತಕ್ಷಣದ ಪ್ರತಿಕ್ರಿಯೆ ನೀಡಿಲ್ಲ.