ನೇಪಾಳದಲ್ಲಿ ಕಾರ್ಯಕ್ರಮದ ಸಮಯ ಬಲೂನ್ ಸ್ಫೋಟ: ಉಪ ಪ್ರಧಾನಿ, ಹಣಕಾಸು ಸಚಿವರಿಗೆ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್;

ನೇಪಾಳದಲ್ಲಿ ಇಂದು ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಬಲೂನ್ ಸ್ಫೋಟಗೊಂಡ ಕಾರಣದಿಂದಾಗಿ ನೇಪಾಳದ ಉಪ ಪ್ರಧಾನಿ ಮತ್ತು ಹಣಕಾಸು ಸಚಿವ ಬಿಷ್ಣು ಪ್ರಸಾದ್ ಪೌಡೆಲ್ ಹಾಗೂ ಪೋಖರ ಮೆಟ್ರೋಪಾಲಿಟನ್ ಮೇಯರ್ ಧನರಾಜ್ ಆಚಾರ್ಯ ಅವರಿಗೆ ಸುಟ್ಟ ಗಾಯಗಳಾಗಿವೆ.

ಇಂದು ಮಧ್ಯಾಹ್ನ ಪೋಖರ ಪ್ರವಾಸೋದ್ಯಮ ವರ್ಷದ ಉದ್ಘಾಟನಾ ಸಮಾರಂಭದಲ್ಲಿ ನಡೆದ ಘಟನೆಯಲ್ಲಿ ಇಬ್ಬರಿಗೂ ಸುಟ್ಟ ಗಾಯಗಳಾಗಿವೆ. ಮೇಲೆ ಹಾರಿಸಲು ಸಿದ್ಧವಾಗಿದ್ದ ಬಲೂನ್‌ಗಳು ಪಟಾಕಿಯ ಬೆಂಕಿ ತಗುಲಿ ಸ್ಫೋಟಗೊಂಡವು.

ಉಪಪ್ರಧಾನಿ ಪೌಡೆಲ್ ಮತ್ತು ಮೇಯರ್ ಆಚಾರ್ಯ ಇಬ್ಬರನ್ನೂ ಹೆಲಿಕಾಪ್ಟರ್ ಮೂಲಕ ಕಠ್ಮಂಡುವಿಗೆ ಸಾಗಿಸಿ ಹೆಚ್ಚಿನ ಚಿಕಿತ್ಸೆಗಾಗಿ ಕೀರ್ತಿಪುರದ ಬರ್ನ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಪೊಲೀಸರ ಪ್ರಕಾರ, ಇಂದಿನ ಸಮಾರಂಭದ ಸಂದರ್ಭದಲ್ಲಿ ಹೈಡ್ರೋಜನ್ ತುಂಬಿದ ಬಲೂನ್ ಪಟಾಕಿಯ ಬೆಂಕಿ ತಗುಲಿ ಸ್ಫೋಟಗೊಂಡಿತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!