ಉದಯಗಿರಿ ಗಲಭೆ ಪೂರ್ವನಿಯೋಜಿತ ಕೃತ್ಯ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

 ಹೊಸದಿಗಂತ ವರದಿ, ಹುಬ್ಬಳ್ಳಿ:

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮತಾಂಧ ಶಕ್ತಿಗಳು ತಲೆ ಎತ್ತಿವೆ. ಇದಕ್ಕೆ ಮೈಸೂರಿನ ಉದಯಗಿರಿಯಲ್ಲಿ ನಡೆದ ಗಲಭೆ ಪ್ರಕರಣ ಮತ್ತೊಂದು ಉದಾಹರಣೆ. ಇದು ಪೂರ್ವನಿಯೋಜಿತವಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗ್ರಹಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಳೇ ಹುಬ್ಬಳ್ಳಿ ಗಲಭೆ, ಎಸ್‌ಡಿಪಿಐ ಹಾಗೂ ಪಿಎ-ಐ ಕಾರ್ಯಕರ್ತರ ಮೇಲಿನ ಪ್ರಕರಣ ಹಿಂಪಡೆದಿದ್ದರಿಂದ ಮತಾಂಧ ಶಕ್ತಿಗಳಿಗೆ ಕುಮ್ಮಕ್ಕು ಸಿಕ್ಕಿದೆ. ಕೆಲವರು ಹಿಂದುಗಳ ಭಾವನೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಮುಂದೆಯಾದರೂ ಎಚ್ಚೆತ್ತುಕೊಳ್ಳಬೇಕು. ಸದ್ಯ ದೇಶದಲ್ಲಿ ಎರಡು ಮೂರು ಕಡೆ ಮಾತ್ರ ಕಾಂಗ್ರೆಸ್ ಉಳಿದಿದ್ದು, ಇಲ್ಲಿಯೂ ಸಹ ಜನರು ಕಿತ್ತೊಗೆಯುತ್ತಾರೆ ಎಂದರು.

ಗಲಭೆ ಪ್ರಕರಣಕ್ಕೆ ಸಂಬಂಽಸಿ ಆರೋಪಿಗಳ ಬಂಧನ ಮಾಡಿದ್ದು, ಅವರನ್ನು ಸಹ ಕಾಂಗ್ರೆಸ್ ನಾಯಕರು ಅಮಾಯಕರು ಎನ್ನುತ್ತಿದ್ದಾರೆ. ಈ ಬಗ್ಗೆ ಉಳಿದ ಸಮಾಜಗಳು ಚಿಂತನೆ ಮಾಡಬೇಕು.ಮಹಾ ಕುಂಭ ಮೇಳ, ಆಯೋಧ್ಯೆ ಬಗ್ಗೆ ಮಾತನಾಡಿ ಅಪಮಾನ ಮಾಡುವ ಕಾಂಗ್ರೆಸ್ ನಾಯಕರು ದೊಡ್ಡ ಪ್ರಮಾಣದಲ್ಲಿ ಗಲಭೆ ನಡೆದರೂ ಸುಮ್ಮನಿದ್ದಾರೆ. ಹಳೇ ಹುಬ್ಬಳ್ಳಿ ಗಲಭೆಯಂತೆ ಇದು ನಡೆದಿದೆ. ಸರ್ಕಾರ ಮಾತ್ರ ಇದನ್ನು ತೃಷ್ಟೀಕರಣ ಮಾಡುತ್ತಿದೆ ಎಂದು ಹರಿಹಾಯ್ದರು.

ಗೃಹ ಸಚಿವರು ಈ ಬಗ್ಗೆ ತಮ್ಮ ಪಕ್ಷದ ಸಿದ್ಧಾಂತದಂತೆ ಮಾತನಾಡುತ್ತಾರೆ. ಗಲಭೆಯಿಂದ ಸಾಮಾನ್ಯ ಜನರ ಆಸ್ತಿಗಳು ಹಾಳಾಗಿವೆ. ಇದಕ್ಕೆ ಪರಿಹಾರ ನೀಡುವವರು ಯಾರು? ಜನಸಾಮಾನ್ಯರ ತೆರಿಗೆ ಹಣದಿಂದ ಸರ್ಕಾರ ಪರಿಹಾರ ನೀಡಲು ಮುಂದಾಗುತ್ತದೆ. ಅದರಲ್ಲಿ ಹಿಂದುಗಳು ಜಾಸ್ತಿ ತೆರಿಗೆ ನೀಡುತ್ತಾರೆ. ಜನರ ಹಣ ಇದಕ್ಕೆ ದುರಪಯೋಗ ಮಾಡುವುದು ಸರಿಯಲ್ಲ. ಯಾರು ಗಲಭೆಯಲ್ಲಿ ಭಾಗವಹಿಸಿದ್ದರೂ ಅವರಿಗೆ ಒದ್ದು ಹಣ ವಸೂಲಿ ಮಾಡಬೇಕು ಎಂದು ಆಗ್ರಹಿಸಿದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!