ಪ್ರತಿಯೊಂದು ದೇಶದಲ್ಲೂ ಬೇಕು ಒಂದೊಂದು ಮಗು: 100 ಮಕ್ಕಳ ತಂದೆಯಾಗುವ ಸನಿಹದಲ್ಲಿ ವೀರ್ಯ ದಾನಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

|ಕಳೆದ ಕೆಲ ವರ್ಷಗಳಿಂದ ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ಗರ್ಭಧಾರಣೆಗಾಗಿ ಹೋರಾಡುತ್ತಿದ್ದ ಮಹಿಳೆಯರಿಗೆ ಉಚಿತ ವೀರ್ಯಧಾನ ಮಾಡುತ್ತಿದ್ದ ಪ್ರಸಿದ್ಧ ವೀರ್ಯ ದಾನಿ ಎಂದು ಖ್ಯಾತಿ ಪಡೆದಿರುವ ಅಮೆರಿಕದ ಕೈಲ್‌ ಗೋರ್ಡಿ (Kyle Gordy) ಇದೀಗ 100 ಮಕ್ಕಳ ತಂದೆಯಾಗುವ ಸನಿಹದಲ್ಲಿದ್ದಾರೆ.

ಈವರೆಗೆ 87 ಮಕ್ಕಳ (Childrens) ತಂದೆಯಾಗಿದ್ದಾರೆ. ʻಬಿ ಪ್ರೆಗ್ನೆಂಟ್ ನೌʼ ವೆಬ್‌ಸೈಟ್‌ ಆರಂಭಿಸಿ ಮಹಿಳೆಯರಿಗೆ ವೀರ್ಯದಾನ ಮಾಡುತ್ತಾ ಬರುತ್ತಿದ್ದಾರೆ. ಇದೀಗ ಅವರು ನೂರು ಮಕ್ಕಳಿಗೆ ತಂದೆಯಾಗುವ ಸನಿಹದಲ್ಲಿದ್ದಾರೆ ಎಂದು ನ್ಯೂಯಾರ್ಕ್‌ಪೋಸ್ಟ್‌ ವರದಿ ಮಾಡಿದೆ.

ನೂರು ಮಕ್ಕಳ ಗುರಿ ಪೂರೈಸಲು ಸ್ವೀಡನ್, ನಾರ್ವೆ, ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್‌ನ 13 ಮಹಿಳೆಯರಿಗೆ ವೀರ್ಯದಾನ ಮಾಡಲು ಮುಂದಾಗಿದ್ದಾರೆ.‌

ಅಲ್ಲದೇ ಕೈಲ್‌ ಗೋರ್ಡಿ ವಿಶ್ವದ ಎಲ್ಲಾ ದೇಶಗಳಲ್ಲೂ ಒಂದೊಂದು ಮಗು ಹೊಂದಬೇಕೆಂಬ ಹೆಬ್ಬಯಕೆಯನ್ನೂ ವ್ಯಕ್ತಪಡಿಸಿದ್ದಾರೆ. ಅದ್ಕಕಾಗಿ ತಾನು ನಿರ್ದಿಷ್ಟ ಮಕ್ಕಳನ್ನು ಹೊಂದಬೇಕೆಂಬ ಗುರಿ ಹಾಕಿಕೊಂಡಿಲ್ಲ ಎಂದಿದ್ದಾರೆ.

ಪ್ರಸಕ್ತ ವರ್ಷದಲ್ಲಿ ಜಪಾನ್‌, ಐರ್ಲೆಂಡ್‌ ಮತ್ತು ಕೊರಿಯಾ ಸೇರಿದಂತೆ ಹಲವು ಹೊಸ ರಾಷ್ಟ್ರಗಳಿಗೆ ಪ್ರವಾಸ ಕೈಗೊಂಡಿದ್ದೇನೆ. ಅಲ್ಲಿ ನಿರ್ದಿಷ್ಟ ಸಂಸ್ಥೆಗಳನ್ನು ಸಂಪರ್ಕಿಸಿ, ಗರ್ಭಧರಿಸಲು ಹಂಬಲಿಸುತ್ತಿರುವ ಮಹಿಳೆಯರಿಗೆ ವೀರ್ಯದಾನ ಮಾಡುತ್ತೇನೆ. ಈ ಮೂಲಕ 2026ರ ವೇಳೆಗೆ ವಿಶ್ವದ ಪ್ರತಿಯೊಂದು ದೇಶದಲ್ಲೂ ಒಂದೊಂದು ಮಗುವನ್ನು ಹೊಂದುವ ಯೋಜನೆ ಹಾಕಿಕೊಂಡಿದ್ದೇನೆ ಎಂಬುದಾಗಿ ಹೇಳಿಕೊಂಡಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!