ಎಲ್ಲರೂ ಮನೆಯಿಂದ ಹೊರಬಂದು ಮತ ಚಲಾಯಿಸಿ, ಚಾನ್ಸ್‌ ಮಿಸ್‌ ಮಾಡ್ಬೇಡಿ: ರಾಹುಲ್‌ ದ್ರಾವಿಡ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಟೀಂ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕುಟುಂಬ ಸಮೇತರಾಗಿ ಮತ ಚಲಾವಣೆ ಮಾಡಿದ್ದಾರೆ. ಮಲ್ಲೇಶ್ವರಂ ಶಿಕ್ಷಾ ಸ್ಕೂಲ್ ಮತಗಟ್ಟೆಯಲ್ಲಿ ಮತದಾನ ಮಾಡಿದ್ದಾರೆ.

ನಂತರ ಮಾತನಾಡಿ. ದಯವಿಟ್ಟು ಎಲ್ಲರೂ ಮತದಾನ ಮಾಡಿ. ಪ್ರಜಾಪ್ರಭುತ್ವ ಮುಂದೆ ತರುವ ಅವಕಾಶ ಇದು. ಮತ ಚಲಾವಣೆ ನಮ್ಮ ಸಂವಿಧಾನಿಕ ಹಕ್ಕಾಗಿದ್ದು, ಹಕ್ಕು ಚಲಾಯಿಸಲು ಎಲ್ಲರೂ ಮನೆಯಿಂದ ಹೊರ ಬನ್ನಿ. ಮತದಾನಕ್ಕಾಗಿ ಚುನಾವಣಾ ಆಯೋಗ ಸಿದ್ಧತೆ, ವ್ಯವಸ್ಥೆಯನ್ನು ಉತ್ತಮವಾಗಿ ಮಾಡಿದೆ. ಹಾಗಾಗಿ ಯುವ ಜನತೆ ತಪ್ಪದೇ ಮತದಾನ ಮಾಡಿ ಎಂದು ಮನವಿ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!