‘ಸೆಲೆಬ್ರಿಟಿ ಅಂದ್ಮೇಲೆ ಎಲ್ಲಾನು ಸಹಿಸ್ಕೋಬೇಕು, ಇಂಥವರ ಮನಸ್ಥಿತಿಯಲ್ಲಿ ಸಮಸ್ಯೆಯಿದೆ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿರಾಟ್ ಕೊಹ್ಲಿ ಹೊಟೇಲ್ ರೂಂನ ವಿಡಿಯೋ ಲೀಕ್ ಆಗಿದ್ದು, ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನನಗೂ ಕೆಲವೊಮ್ಮೆ ಪ್ರೈವೆಸಿ ನೀಡದಂತ ಸನ್ನಿವೇಶಗಳು ಎದುರಾಗಿವೆ. ಆದರೆ ಇಷ್ಟರ ಮಟ್ಟಿಗೆ ಎಂದಿಗೂ ಸಮಸ್ಯೆಯಾಗಿಲ್ಲ. ಕೊಹ್ಲಿಗೆ ಖಾಸಗಿತನಕ್ಕೆ ಧಕ್ಕೆ ತಂದಿರುವುದನ್ನು ಸಹಿಸುವುದು ಅಸಾಧ್ಯ. ಯಾವುದೇ ಸೆಲೆಬ್ರಿಟಿಗೆ ಹೀಗೆ ಮಾಡಬಾರದು. ಇದು ಮನುಷ್ಯತ್ವ ಅಲ್ಲ. ಸೆಲೆಬ್ರಿಟಿ ಅಲ್ವಾ, ಇದನ್ನೆಲ್ಲಾ ಅವರು ಸಹಿಸ್ಕೊಬೇಕು ಎನ್ನುವ ಮನಸ್ಥಿತಿ ಇರುವವರೂ ಕೂಡ ಈ ಸಮಸ್ಯೆಯ ಒಂದು ಭಾಗವಾಗಿದ್ದಾರೆ ಎಂದು ಖಾರವಾಗಿ ಹೇಳಿದ್ದಾರೆ.

ಕೊಹ್ಲಿ ಹೊಟೇಲ್ ರೂಂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೊಹ್ಲಿ ಖಾಸಗಿತನಕ್ಕೆ ಧಕ್ಕೆಯಾಗಿದೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!