ಎಲ್ಲಾದ್ಕೂ ಒಂದು ಇತಿಮಿತಿ ಅನ್ನೋದು ಇದೆ, Just Get Out!! ಹರೀಶ್ ಪೂಂಜಾಗೆ ಸ್ಪೀಕರ್ ವಾರ್ನಿಂಗ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಸದನದಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡುತ್ತಿದ್ದ ಸಂದರ್ಭದಲ್ಲಿ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಯಾರು? ಎಂಬ ಬಿರುಸು ಚರ್ಚೆ ನಡೆಯಿತು.

ಈ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ತೀವ್ರ ವಾಕ್ಸಮರ ನಡೆದಾಗ ತಾಳ್ಮೆ ಕಳೆದುಕೊಂಡು, ಕೆಂಡಾಮಂಡಲರಾದ ಸ್ಪೀಕರ್ ‌ಯು.ಟಿ ಖಾದರ್ ʻತೆಗೆದು ಬಿಸಾಡುತ್ತೇನೆ, ಗೆಟ್ ಔಟ್!ʼ ಎಂದು ಬಿಜೆಪಿ ಸದಸ್ಯ ಹರೀಶ್ ಪೂಂಜಾಗೆ ಖಡಕ್ ವಾರ್ನಿಂಗ್ ನೀಡಿದರು.

ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಬುಡಕಟ್ಟು ಉಪ ಯೋಜನೆ ನಿಧಿಯನ್ನು ಖಾತರಿ ಯೋಜನೆಗಳಿಗಾಗಿ ಬಳಸಲಾಗಿದೆ ಎಂಬ ಆರೋಪದ ಮೇಲೆ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ತೀವ್ರ ವಾಗ್ವಾದ ನಡೆಸಿದರು. ಮುಖ್ಯಮಂತ್ರಿ ತಮ್ಮ ಉತ್ತರ ನೀಡುತ್ತಿರುವಾಗ ಬಿಜೆಪಿ ಸದಸ್ಯರು ಈ ವಿಷಯವನ್ನು ಎತ್ತಿದರು.

ಎಲ್ಲದಕ್ಕೂ ಒಂದು ಮಿತಿ ಇದೆ ಎಂದು ಖಾದರ್ ಹೇಳಿದರು. ನೀವು ಕೇಳಲು ಬಯಸದಿದ್ದರೆ, ಸದನದಿಂದ ಹೊರನಡೆಯಿರಿ. ಇಲ್ಲದಿದ್ದರೆ, ನಾನು ನಿಮ್ಮನ್ನು ಹೊರಗೆ ಬಿಸಾಡಬೇಕಾಗುತ್ತದೆ. ಕುಳಿತು ಆಲಿಸಿ, ಅಥವಾ ಹೊರನಡೆಯಿರಿ ಎಂದು ಅವರು ಸದನದಲ್ಲಿ ಗದ್ದಲ ಸೃಷ್ಟಿಸುತ್ತಿದ್ದ ಬಿಜೆಪಿ ಸದಸ್ಯರಿಗೆ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here