ಎಲ್ಲವೂ ಸರಿಯಿದೆ… ಯಾವುದೇ ಗೊಂದಲ ಇಲ್ಲ: ಸಂಸದೆ ಸುಮಲತಾ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಲೋಕಸಭೆ ಚುನಾವಣೆಗೆ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಸಂಸದೆ ಸುಮಲತಾ ಅವರು ಮಂಡ್ಯ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸುಳಿವು ನೀಡಿದ್ದಾರೆ.

ಸಂಸದೆ ಸುಮಲತಾ ಜತೆ ಮುನಿಸಿಕೊಂಡಿದ್ದ ಮಂಡ್ಯದ ಬಿಜೆಪಿ ಮುಖಂಡ ಸಚ್ಚಿದಾನಂದ ಅವರನ್ನು ಬೆಂಗಳೂರಿಗೆ ಕರೆಸಿದ ನಟ ದರ್ಶನ್, ಇಬ್ಬರೊಂದಿಗೆ ಕೂತು ಮಾತನಾಡಿ ನಡೆಸಿದ ಸಂಧಾನ ಯಶಸ್ವಿಯಾಗಿದೆ.

ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಸುಮಲತಾ, ನಾನು ಸಚ್ಚಿದಾನಂದ ಚೆನ್ನಾಗಿ ಇದ್ದೇವೆ. ಯಾಕೆ ನಾವು ಸರಿ ಇಲ್ಲ ಎಂದು ರೂಮರ್ ಬಂತೊ ಗೊತ್ತಿಲ್ಲ. ಅವರು ಕಳೆದ ಬಾರಿ ಕೂಡ ನನ್ನ ಜೊತೆ ನಿಂತು ಕೆಲಸ ಮಾಡಿದ್ದಾರೆ‌ ಎಂದು ಹೇಳಿದರು.

ಇಂದು ಮಂಡ್ಯ ಬೆಂಬಲಿಗರ ಜೊತೆಗೆ ಸಭೆ ಕರೆದಿದ್ದೆ, ಐದು ವರ್ಷಗಳ ಜರ್ನಿ ಬಗ್ಗೆ ಜನರ ಅಭಿಪ್ರಾಯ, ಮಾಡಿದ ಕೆಲಸದ ಬಗ್ಗೆ ಅಭಿಪ್ರಾಯ ಪಡೆಯಲಾಗಿದೆ. ಒಳ್ಳೆಯ ಚರ್ಚೆ ಆಯ್ತು. ಮುಂದೆ ಹೇಗೆ ನನ್ನ ನೋಡೋಕೆ ಇಷ್ಟ ಪಡ್ತಾರೆ ಎಂದು ಚರ್ಚೆ ಮಾಡಿದ್ವಿ. ಪಾಸಿಟಿವ್ ಚರ್ಚೆ ಆಯ್ತು. ಯಾವುದೇ ಗೊಂದಲ ಇಲ್ಲ. ಮೀಡಿಯಾ ಚರ್ಚೆ ಎಲ್ಲಾ ನೋಡಿ ಸ್ವಲ್ಪ ಗೊಂದಲ ಇತ್ತು ಜನರಿಗೆ‌. ಎಲ್ಲಾರೂ ಜೊತೆಗೆ ಇದ್ದಾರೆ‌‌ ಎಂದು ಸಭೆ ಬಳಿಕ ಮಾಹಿತಿ ನೀಡಿದರು.

ಟಿಕೆಟ್ ಒಂದೇ ದಿನ ನಿರ್ಣಯ ಆಗೋದಿಲ್ಲ. ಮೋದಿಜಿಗೂ ಮಂಡ್ಯದಲ್ಲಿ ಬೆಳೆಸಬೇಕು ಎಂದು ಇದೆ. ಮೈತ್ರಿ ಆಗಿದೆ, ನಾವು ಒಟ್ಟಾಗಿ ಹೋಗಬೇಕಿದೆ. ಮೋದಿಗೆ ನಿಸ್ವಾರ್ಥ ಸೇವೆ ಉದ್ದೇಶ ಇದೆ ಎಂದರು.

ಕಾರ್ಯಕರ್ತರು ನೀವು ಮಂಡ್ಯ ಬಿಡಬೇಡಿ ಎಂದಿದ್ದಾರೆ. ಮೊದಲ ಅವಕಾಶ ನನಗೆ ಪಾರ್ಟಿ ನೀಡತ್ತೆ ಎಂದು ನಂಬಿಕೆ ಇದೆ. ಕುಮಾರಸ್ವಾಮಿ ಅವರು ಎಲ್ಲೂ ತಾನು ಮಂಡ್ಯದಿಂದ ಸ್ಪರ್ಧೆ ಮಾಡ್ತಾರೆ ಎಂದು ಹೇಳಿಲ್ಲ. ಬೆಂಗಳೂರು ನಾರ್ಥ್ ನನಗೆ ಬೇಡ. ನಂಗೆ ಬೆಂಗಳೂರು ನಾರ್ಥ್ ಟಿಕೆಟ್ ಬೇಕು ಅಂದರೆ ಬಹಳ ಸುಲಭ ಪಡೆಯೋದು. ಆದರೆ ನಂಗೆ ಮಂಡ್ಯದಲ್ಲೆ ರಾಜಕೀಯ ಮಾಡಬೇಕು. ಅಂಬರೀಶ್ ಮಂಡ್ಯದ ಗಂಡು ಎಂದೇ ದೇಶಕ್ಕೆ ಫೇಮಸ್ ಆದ್ರು ಎಂದು ಹೇಳಿದರು.

ಮಂಡ್ಯ ತನಗೆ ಬೇಕು ಸುಮಲತಾ ಅವರಿಗೆ ಟಿಕೆಟ್ ನೀಡ್ತೇವೆ ಎಂದು ಬಿಜೆಪಿ ನಾಯಕರೇ ದೇವೆಗೌಡರಿಗೆ ಹೇಳಿದ್ದಾರೆ ಎನ್ನುವ ವಿಚಾರವಾಗಿ ಪ್ರತಿಕ್ರಿಯಿಸಿದ ಸುಮಲತಾ ಅದು ನನ್ನ ಗಮನಕ್ಕೆ ಬಂದಿಲ್ಲ ಎಂದಿದ್ದಾರೆ.

ನಾನು ಬಿಜೆಪಿಗೆ ಬೆಂಬಲ ನೀಡಿದ್ದಕ್ಕೆ ಮಂಡ್ಯದಲ್ಲಿ ಬಿಜೆಪಿ ವಿಧಾನಸಭೆ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿತು ಎಂದು ಹೇಳಿಕೊಳ್ಳುವ ಜಾಯಮಾನ ನನ್ನದಲ್ಲ. ನಾನು ನನ್ನಿಂದ ಅಂತ ಏನೂ ಇಲ್ಲ. ಮೋದಿಜಿ ವಿಶ್ವನಾಯಕ. ಅವರ ಪ್ರಚಾರಕ್ಕೆ ಅಭಿವೃದ್ಧಿ ಕಾರಣ ಎಂದರು.

ಮಂಡ್ಯ ಜೆಡಿಎಸ್‌ ಪಾಲಾದ್ರೆ ಎಂಬ ಪ್ರಶ್ನೆಗೆ ನನಗೆ ಅದರ ಬಗ್ಗೆ ಗೊತ್ತಿಲ್ಲ. ನಾನು ಪಕ್ಷ ಅಲ್ಲ. ಅವರಿಗೆ ಕೇವಲ ಮಂಡ್ಯ ಅಲ್ಲ. ಅವರು ಯಾವ ರೀತಿ ಅಲಯನ್ಸ್ ಮಾಡಿಕೊಳ್ತಾರೋ ಗೊತ್ತಿಲ್ಲ. ಆದ್ರೆ ಅವರ ನಿರ್ಧಾರ ಏನಾಗಲಿದೆ ನೋಡಬೇಕು. ಈಗಾಗಲೇ ಮೈತ್ರಿ ಕೂಡ ಫಿಕ್ಸ್ ಇದೆ. 400+ ಸೀಟು ಗೆಲ್ಲುವ ಟಾರ್ಗೆಟ್ ಇದೆ. ಗೆಲ್ಲಬೇಕು ಅಂದಾಗ ಎಲ್ಲರ ನಿರ್ಧಾರ ಮುಖ್ಯ ಎಂದರು.

ಇಂಡಿಪೆಂಡೆಂಟ್ ಸ್ಪರ್ಧೆ ಇಲ್ಲ ಎಂದು ಸ್ಪಷ್ಟಪಡಿಸಿದ್ದು, ನಮ್ಮ ಬೆಂಬಲಿಗರು ಬಂದಾಗ ಮಂಡ್ಯ ಬಿಡಬಾರದು ಅಂತ ಹೇಳಿದ್ದಾರೆ. ಎಲ್ಲೇ ಇದ್ರೂ ನಿಮ್ಮ ಪರವಾಗಿ ಇರ್ತೇವೆ ಅಂತ ಹೇಳಿದ್ದಾರೆ. ಬಿಜೆಪಿಯಿಂದಲೇ ಸ್ಪರ್ಧೆ ಮಾಡಿ ಎಂದಿದ್ದಾರೆ ಎಂದು ಸ್ಪಷ್ಟಪಡಿಸಿದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!