ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಪಿ ಪಾಕಿಸ್ತಾನ ಇಷ್ಟಾದ್ರೂ ಬುದ್ಧಿ ಕಲಿಯುವ ಲಕ್ಷಣ ಕಾಣ್ತಿಲ್ಲ. ಪಂಜಾಬ್ನ ಅಮೃತಸರದ ಮೇಲೆ ಮತ್ತೆ ದಾಳಿಗೆ ಯತ್ನಿಸಿರುವ ಬಗ್ಗೆ ಭಾರತೀಯ ಸೇನೆ ಇದೀಗ ಅಧಿಕೃತವಾಗಿ ಮಾಹಿತಿ ನೀಡಿದೆ.
“ನಮ್ಮ ಪಶ್ಚಿಮ ಗಡಿಗಳಲ್ಲಿ ಪಾಕಿಸ್ತಾನದ ಡ್ರೋನ್ ದಾಳಿ ಮತ್ತು ಇತರ ಯುದ್ಧಸಾಮಗ್ರಿಗಳ ದಾಳಿ ಮುಂದುವರೆದಿದೆ. ಅಂತಹ ಒಂದು ಘಟನೆಯಲ್ಲಿ, ಇಂದು ಬೆಳಿಗ್ಗೆ ಸರಿಸುಮಾರು 5 ಗಂಟೆಗೆ, ಅಮೃತಸರದ ಖಾಸಾ ಕ್ಯಾಂಟ್ ಮೇಲೆ ಹಾರುತ್ತಿರುವ ಬಹು ಶತ್ರು ಶಸ್ತ್ರಸಜ್ಜಿತ ಡ್ರೋನ್ಗಳು ಕಂಡುಬಂದವು. ನಮ್ಮ ವಾಯು ರಕ್ಷಣಾ ಘಟಕಗಳು ಪ್ರತಿಕೂಲ ಡ್ರೋನ್ಗಳನ್ನು ತಕ್ಷಣವೇ ಧ್ವಂಸ ಮಾಡಿದೆ.” ಎಂದು ಭಾರತೀಯ ಸೇನೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.
“ಭಾರತದ ಸಾರ್ವಭೌಮತ್ವವನ್ನು ಉಲ್ಲಂಘಿಸುವ ಮತ್ತು ನಾಗರಿಕರಿಗೆ ಅಪಾಯವನ್ನುಂಟುಮಾಡುವ ಪಾಕಿಸ್ತಾನದ ದುಷ್ಟ ಪ್ರಯತ್ನ ಸ್ವೀಕಾರಾರ್ಹವಲ್ಲ. #IndianArmy ಶತ್ರುಗಳ ಯೋಜನೆಗಳನ್ನು ವಿಫಲಗೊಳಿಸುತ್ತದೆ.” ಎಂದು ಉಗ್ರ ಪೋಷಕ ಪಾಕ್ ಗೆ ಖಡಕ್ ಸಂದೇಶ ರವಾನಿಸಿದೆ.
ಮಾಹಿತಿಗಳ ಪ್ರಕಾರ ಕಳೆದ ರಾತ್ರಿ ಭಾರತದ ಮೇಲೆ 15ಕ್ಕೂ ಹೆಚ್ಚು ಡ್ರೋಣ್ಗಳನ್ನು ಉಡಾಯಿಸಿದೆ. ಜೊತೆಗೆ ಲಾಂಗ್ ರೇಂಜ್ ಮಿಸೈಲ್ಗಳನ್ನೂ ಬಳಸಿದೆ ಎನ್ನಲಾಗಿದೆ.