ಹೊಸದಿಗಂತ ವರದಿ, ಕಲಬುರಗಿ:
ದುಷ್ಕರ್ಮಿಗಳು ದೇವರ ಮೂರ್ತಿಗಳನ್ನು ವಿರೂಪಗೊಳಿಸಿರುವಂತಹ ಘಟನೆ ಜಿಲ್ಲೆಯ ಶಹಾಬಾದ್ ತಾಲೂಕಿನ ಮುತ್ತಗಾ ಗ್ರಾಮದ ಹೊರವಲಯದ ಕಂಠಿ ಬಸವೇಶ್ವರ ದೇವಸ್ಥಾನದಲ್ಲಿ ಮಂಗಳವಾರ ನಡೆದಿದೆ.
ಮುತ್ತಗಾ ಗ್ರಾಮದ ಹೊರವಲಯದ ಕಂಠಿ ಬಸವೇಶ್ವರ ದೇವಸ್ಥಾನದಲ್ಲಿರುವ ಬಸವಣ್ಣನ ಮೂರ್ತಿಯನ್ನು ವಿರೂಪಗೊಳಿಸಲಾಗಿದ್ದು, ತದನಂತರ ಮೂರ್ತಿಯನ್ನು ದೇವಾಲಯದಿಂದ ಹೊಲಗಡೆ ಬಿಸಾಡಿದ್ದಾರೆ.
ಇನ್ನೂ ಗ್ರಾಮದ ಗ್ರಾಮಸ್ಥರು ಬೆಳಿಗ್ಗೆ ಪೂಜೆಗೆಂದು ದೇವಸ್ಥಾನಕ್ಕೆ ತೆರಳಿದಾಗ ಈ ವಿಷಯ ಗಮನಕ್ಕೆ ಬಂದಿದ್ದು, ಮೂರ್ತಿ ವಿರೂಪಗೊಳಿಸಿದ ಆರೋಪಿಗಳನ್ನು ಪತ್ತೆ ಹಚ್ಚಬೇಕು ಎಂದು ಆಗ್ರಹಿಸಿದ್ದಾರೆ.
ಶಹಾಬಾದ್ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.