‘EVM ಹ್ಯಾಕ್ ಮಾಡಿ ತೋರಿಸಿ: ಕಾಂಗ್ರೆಸ್ ಗೆ ಮಿತ್ರಪಕ್ಷ ಟಿಎಂಸಿ ಸವಾಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎಲೆಕ್ಟ್ರಾನಿಕ್ ಮತ ಯಂತ್ರಗಳ ವಿಶ್ವಾಸಾರ್ಹತೆಯ ಕುರಿತು ಪಡೆ ಪದೇ ಕ್ಯಾತೆ ತೆಗೆಯುತ್ತಿರುವ ಕಾಂಗ್ರೆಸ್ ವಿರುದ್ಧ ಟಿಎಂಸಿ ಕೂಡ ಅಂತರ ಕಾಯ್ದುಕೊಂಡಿದೆ.

ಇವಿಎಂಗಳ ವಿಶ್ವಾಸಾರ್ಹತೆ ಬಗ್ಗೆ ಕಾಂಗ್ರೆಸ್ ಪ್ರಶ್ನೆಗಳನ್ನು ಎತ್ತುತ್ತಿರುವಂತೆಯೇ ಇದಕ್ಕೆ ಭಿನ್ನವಾಗಿ ನಿಲವು ತಳೆದಿರುವ ತೃಣಮೂಲ ಕಾಂಗ್ರೆಸ್ ‘EVM ಹ್ಯಾಕ್ ಮಾಡಿ ತೋರಿಸಿ’ ಎಂದು ಸವಾಲೆಸೆದಿದೆ.

ಟಿಎಂಸಿ ಸಂಸದ ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಸೋಮವಾರ ಈ ವಿಷಯದ ಬಗ್ಗೆ ಕಾಂಗ್ರೆಸ್ ಜೊತೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇವಿಎಂಗಳ ಮೇಲಿನ ಆರೋಪಗಳು ಆಗಿದ್ದಾಂಗ್ಗೆ ಕೇಳಿಬರುತ್ತಿವೆಯಾದರೂ ಅಂತಹ ಆರೋಪಗಳು ಈ ವರೆಗೂ ಸಾಬೀತಾಗಿಲ್ಲ. ಆರೋಪಗಳನ್ನು ಮಾಡುವ ಜನರು ಇವಿಎಂಗಳನ್ನು ಹೇಗೆ “ಹ್ಯಾಕ್” ಮಾಡಬಹುದು ಎಂಬುದನ್ನು ಪ್ರದರ್ಶಿಸಬೇಕು ಎಂದು ಒತ್ತಾಯಿಸಿದರು.

ಇವಿಎಂ ಬಗ್ಗೆ ಪ್ರಶ್ನೆಗಳನ್ನು ಎತ್ತುವ ಜನರು, ಅವರ ಬಳಿ ಏನಾದರೂ ಸಾಕ್ಷಿಗಳು ಇದ್ದರೆ ಅವರು ಚುನಾವಣಾ ಆಯೋಗಕ್ಕೆ ಹೋಗಿ ಡೆಮೊ ತೋರಿಸಬೇಕು. ಇವಿಎಂ ಯಾದೃಚ್ಛೀಕರಣದ ಸಮಯದಲ್ಲಿ ಕೆಲಸ ಸರಿಯಾಗಿ ನಡೆದರೆ ಮತ್ತು ಬೂತ್‌ನಲ್ಲಿ ಕೆಲಸ ಮಾಡುವ ಜನರು ಅಣಕು ಮತದಾನ ಮತ್ತು ಎಣಿಕೆಯ ಸಮಯದಲ್ಲಿ ಪರಿಶೀಲಿಸಿದರೆ, ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ನಾನು ಭಾವಿಸುತ್ತೇನೆ ಅಭಿಷೇಕ್ ಬ್ಯಾನರ್ಜಿ ಹೇಳಿದ್ದಾರೆ.

ಇನ್ನೂ ಯಾರಾದರೂ ಇವಿಎಂಗಳನ್ನು ಹ್ಯಾಕ್ ಮಾಡಬಹುದು ಎಂದು ಭಾವಿಸಿದರೆ, ಅವರು ಚುನಾವಣಾ ಆಯೋಗವನ್ನು ಭೇಟಿ ಮಾಡಿ ಇವಿಎಂಗಳನ್ನು ಹೇಗೆ ಹ್ಯಾಕ್ ಮಾಡಬಹುದು ಎಂಬುದನ್ನು ತೋರಿಸಬೇಕು. ಕೇವಲ ಯಾದೃಚ್ಛಿಕ ಹೇಳಿಕೆಗಳನ್ನು ನೀಡುವ ಮೂಲಕ ಏನೂ ಮಾಡಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!