ಹೊಸದಿಗಂತ ಡಿಜಿಟಲ್ ಡೆಸ್ಕ್:
ತನ್ನನ್ನು ಬಿಟ್ಟು ಬೇರೆಯವಳನ್ನು ಮದುವೆಯಾಗುತ್ತಿದ್ದಾನೆ ಎಂದು ಸಿಟ್ಟಿಗೆದ್ದ ಮಾಜಿ ಪ್ರಿಯತಮೆ, ತನ್ನ ಎಕ್ಸ್‌ಬಾಯ್‌ಫ್ರೆಂಡ್ ಮುಖಕ್ಕೆ ಆಸಿಡ್ ಎರಚಿದ್ದಾಳೆ.
ಛತ್ತೀಸ್‌ಗಢದ ಬಸ್ತಾರ್‌ನಲ್ಲಿ ಘಟನೆ ನಡೆದಿದ್ದು,ಎಕ್ಸ್‌ಬಾಯ್‌ಫ್ರೆಂಡ್ ಮದುವೆ ಸುದ್ದಿ ಕೇಳುತ್ತಿದ್ದಂತೆಯೇ ಹುಡುಗನ ವೇಷ ಧರಿಸಿ ಆಕೆ ಮದುವೆ ಮಂಟಪಕ್ಕೆ ಬಂದಿದ್ದಾಳೆ.
ಇನ್ನೇನು ತಾಳಿ ಕಟ್ಟಬೇಕು ಎನ್ನುವಾಗ ಆಸಿಡ್ ತೆಗೆದು ಎರಚಿದ್ದಾಳೆ, ವರ, ವಧು, ಸುತ್ತಮುತ್ತ ಇದ್ದ ೧೦ ಮಂದಿಗೆ ಆಸಿಡ್ ಬಿದ್ದಿದೆ. ಪೊಲೀಸರು ಯುವತಿಯನ್ನು ಅರೆಸ್ಟ್ ಮಾಡಿದ್ದಾರೆ.
ಹಲವು ವರ್ಷಗಳಿಂದ ಯುವತಿ ಹಾಗೂ ದಮೃಧರ್ ರಿಲೇಷನ್‌ಶಿಪ್‌ನಲ್ಲಿದ್ದರು. ಆತ ಮದುವೆಯಾಗುತ್ತೇನೆ ಎಂದು ಭರವಸೆ ನೀಡಿದ್ದ. ನನ್ನ ಜೊತೆ ಪ್ರೀತಿ, ಮತ್ತೊಬ್ಬಳ ಜೊತೆ ಮದುವೆಗೆ ನಾನು ಒಪ್ಪೋದಿಲ್ಲ ಎಂದು ಯುವತಿ ಆಸಿಡ್ ದಾಳಿ ಮಾಡಿದ್ದಾಳೆ.
ಆತನ ಎಂಗೇಜ್‌ಮೆಂಟ್ ಬಗ್ಗೆ ತಿಳಿಯುತ್ತಿದ್ದಂತೆಯೇ ಸಾಕಷ್ಟು ಬಾರಿ ಆಕೆ ಫೋನ್ ಮಾಡಿದ್ದಾಳೆ. ಆತ ಯಾವುದಕ್ಕೂ ಉತ್ತರ ಕೊಡದೇ ದೂರಾದಾಗ ಆಸಿಡ್ ಹಾಕುವ ಆಲೋಚನೆ ಮಾಡಿದ್ದಾಳೆ ಎನ್ನಲಾಗಿದೆ.