ಎಕ್ಸ್​​​ ಮುಖ್ಯಸ್ಥ ಎಲೋನ್ ಮಸ್ಕ್ ಭಾರತ ಭೇಟಿ ಮುಂದೂಡಿಕೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಏಪ್ರಿಲ್​​ 21 ಭಾನುವಾರ ಭಾರತಕ್ಕೆ ಭೇಟಿ ನೀಡಬೇಕಿದ್ದ ಎಕ್ಸ್​​​ ಮುಖ್ಯಸ್ಥ ಎಲೋನ್ ಮಸ್ಕ್ (Elon Musk) ಇಂದು ತನ್ನ ಪ್ರಯಾಣವನ್ನು ಮುಂದೂಡಿದ್ದಾರೆ.

ಈ ಕುರಿತು ಎಕ್ಸ್​​​ ಮೂಲಕ ಟ್ವೀಟ್​​​ ಮಾಡಿದ ಅವರು, ಟೆಸ್ಲಾದ ಬಗ್ಗೆ ಕೆಲವೊಂದು ಕೆಲಸ ಹಾಗೂ ಒತ್ತಡ ಇರುವ ಕಾರಣ ನಾನು ಭಾರತಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಆದರೆ ಮುಂದಿನ ದಿನಗಳಲ್ಲಿ ನಾನು ಭಾರತಕ್ಕೆ ಬರಲು ಎದುರು ನೋಡುತ್ತಿದ್ದೇನೆ. ಪ್ರಧಾನಿ ಮೋದಿ ಅವರನ್ನು ಕೂಡ ನಾನು ಭೇಟಿ ಮಾಡಬೇಕಿತ್ತು. ಖಂಡಿತ ಮುಂದಿನ ದಿನಗಳಲ್ಲಿ ಅವರನ್ನು ಭೇಟಿ ಮಾಡುತ್ತೇನೆ ಎಂದು ಹೇಳಿದ್ದಾರೆ.

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್ ಭಾರತಕ್ಕೆ ಭೇಟಿ ನೀಡುವ ಬಗ್ಗೆ ಹಿಂದೆ ಆಸಕ್ತಿಯನ್ನು ತೋರಿಸಿದರು. ಕಳೆದ ವಾರ ಮಸ್ಕ್ ಅವರು “ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಎದುರು ನೋಡುತ್ತಿದ್ದೇನೆ. ಎಪ್ರಿಲ್​​ 21ಕ್ಕೆ ಭಾರತಕ್ಕೆ ಭೇಟಿ ನೀಡಲಿದ್ದೇನೆ ಎಂದು ಹೇಳಿಕೊಂಡಿದರು. ಆದರೆ ಇದೀಗ ನನ್ನ ಭೇಟಿ ವಿಳಂಬವಾಗಲಿದೆ. ಟೆಸ್ಲಾದ ಕೆಲವೊಂದು ಒತ್ತಡದ ಕೆಲಸ ಬಂದ ಕಾರಣ ನಾನು ಭಾರತಕ್ಕೆ ಏ.21ಕ್ಕೆ ಭೇಟಿ ನೀಡುವುದಿಲ್ಲ ಎಂದು ಇಂದು ಎಕ್ಸ್​​​ ಟ್ವೀಟ್​​ ಮಾಡಿದ್ದಾರೆ.

ಕಳೆದ ಜೂನ್‌ನಲ್ಲಿ ಯುಎಸ್‌ನಲ್ಲಿ ಪ್ರಧಾನ ಮಂತ್ರಿಯನ್ನು ಭೇಟಿಯಾಗಿದ್ದರು. ಈ ಸಮಯದಲ್ಲಿ ನಾನು ಭಾರತಕ್ಕೆ ಭೇಟಿ ನೀಡುತ್ತೇನೆ, ಹಾಗೂ ಟೆಸ್ಲಾಗೆ ಹೊಸ ಮಾರುಕಟ್ಟೆಯನ್ನು ಭಾರತಕ್ಕೆ ತರುತ್ತೇನೆ ಎಂದು ಹೇಳಿದರು. ಇದರ ಜತೆಗೆ ಭಾರತದಲ್ಲಿ $2-3 ಶತಕೋಟಿ (1,66,74,08,00,000) ಹೂಡಿಕೆ ಮಾಡುವುದಾಗಿ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!