ICICI ಮಾಜಿ ಸಿಇಒ ಚಂದಾ ಕೊಚ್ಚರ್, ಪತಿ ದೀಪಕ್ ಬಂಧನ ಅಧಿಕಾರದ ದುರುಪಯೋಗ: ಹೈಕೋರ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಾಜಿ ಐಸಿಐಸಿಐ ಬ್ಯಾಂಕ್​ನ ಮುಖ್ಯಸ್ಥೆ ಚಂದಾ ಕೋಚರ್ ಹಾಗೂ ಅವರ ಪತಿ ದೀಪಕ್ ಕೋಚರ್ (Chanda Kochhar and Deepak Kochhar) ವಿರುದ್ಧದ ಅವ್ಯವಹಾರ ಪ್ರಕರಣದಲ್ಲಿ ಸಿಬಿಐ ವರ್ತನೆಗೆ ಬಾಂಬೆ ಹೈಕೋರ್ಟ್ ಅಸಮಾಧಾನಗೊಂಡಿದೆ.

ಪ್ರಕರಣದಲ್ಲಿ ಚಂದಾ ಮತ್ತು ದೀಪಕ್ ಕೋಚರ್ ಅವರನ್ನು ಬಂಧಿಸಿರುವ ಸಿಬಿಐ ಸರಿಯಾಗಿ ಕಾನೂನು ಪಾಲಿಸದೇ ಅಧಿಕಾರ ದುರುಪಯೋಪಡಿಸಿಕೊಂಡಿದೆ ಎಂದು ಹೈಕೋರ್ಟ್ ವಿಭಾಗೀಯ ಪೀಠ (Bombay high court) 2024ರ ಫೆಬ್ರುವರಿ 6ರಂದು ನೀಡಿದ ತೀರ್ಪನ್ನು ಇಂದು ಬಹಿರಂಗಪಡಿಸಲಾಗಿದೆ.

2023ರ ಜನವರಿ 9ರಂದು ಬಾಂಬೆ ಹೈಕೋರ್ಟ್​ನ ಮತ್ತೊಂದು ಪೀಠವು ಕೋಚರ್ ದಂಪತಿಗೆ ಜಾಮೀನು ನೀಡಿತ್ತು. ಕಳೆದ ವಾರದಂದು ನ್ಯಾಯಾಧೀಶರಾದ ಅನುಜಾ ಪ್ರಭುದೇಸಾಯಿ ಮತ್ತು ಎನ್ ಆರ್ ನೋರ್ಗರ್ ಅವರಿರುವ ಹೈಕೋರ್ಟ್ ವಿಭಾಗೀಯ ಪೀಠ ಈ ಜಾಮೀನು ಆದೇಶವನ್ನು ಎತ್ತಿಹಿಡಿದು ಸಮರ್ಥಿಸಿಕೊಂಡಿದೆ. ಜೊತೆಗೆ, ಸಿಬಿಐಗೂ ಛೀಮಾರಿ ಹಾಕಿದೆ.

ಚಂದಾ ಕೋಚರ್ ಮತ್ತು ದೀಪಕ್ ಕೋಚರ್ ಅವರನ್ನು 2022ರ ಡಿಸೆಂಬರ್ 23ರಂದು ಬಂಧಿಸಲಾಗಿತ್ತು. ಇದನ್ನು ಪ್ರಶ್ನಿಸಿ ಅವರಿಬ್ಬರು ತಮ್ಮ ವಕೀಲರ ಮೂಲಕ ಕೋರ್ಟ್ ಮೊರೆ ಹೋಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!