ಅಗ್ನಿ ಅನಾಹುತಕ್ಕೆ ಬಲಿಯಾದ ಮಾಜಿ ಐಪಿಎಲ್ ಆಟಗಾರನ ಸಹೋದರಿ, ಅಳಿಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮುಂಬೈನಲ್ಲಿ ನಡೆದ ಅಗ್ನಿ ಅನಾಹುತಕ್ಕೆ ತಮ್ಮ ಕುಟುಂಬವನ್ನು ಭೇಟಿಯಾಗಲು ಸ್ಕಾಟ್ಲೆಂಡ್‌ನಿಂದ ಬಂದಿದ್ದ ಮಹಿಳೆ ಹಾಗೂ ಅಪ್ರಾಪ್ತ ಮಗ ಕೊನೆಯುಸಿರೆಳೆದಿದ್ದಾರೆ.

ಕಂಡಿವಾಲಿಯಲ್ಲಿನ ಬಹುಮಹಡಿ ಕಟ್ಟಡದಲ್ಲಿ ಬೆಂಕಿ ದುರಂತ ಸಂಭವಿಸಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಮಾಜಿ ಆಟಗಾರ ಪೌಲ್ ವಾಲ್ತಟಿಯವರ ಸಹೋದರಿ ಹಾಗೂ ಅಳಿಯ ಈ ದುರಂತದಲ್ಲಿ ಕೊನೆಯುಸಿರೆಳೆದಿರುವುದು ಬೆಳಕಿಗೆ ಬಂದಿದೆ.

ಇಬ್ಬರು ಮೃತರನ್ನು 45 ವರ್ಷದ ಗ್ಲೋರಿ ವಾಲ್ತಟಿ ಹಾಗೂ 8 ವರ್ಷದ ಜೋಶ್ವಾ ಜೆಮ್ಸ್ ರೊಬರ್ಟ್‌ ಎಂದು ಗುರುತಿಸಲಾಗಿದೆ. ಗ್ಲೋರಿ ವಾಲ್ತಟಿ ಅವರು ಐಪಿಎಲ್‌ನಲ್ಲಿ ಕಿಂಗ್ಸ್‌ ಇಲೆವನ್ ಪಂಜಾಬ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸಿದ್ದ ಪೌಲ್ ವಾಲ್ತಟಿಯವರ ಸಹೋದರಿಯಾಗಿದ್ದಾರೆ. ಇನ್ನು ಈ ಅಗ್ನಿ ಅವಘಡದಲ್ಲಿ ಇನ್ನೂ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ .

ಗ್ಲೋರಿ ವಾಲ್ತಟಿಯವರು ಸ್ಕಾಟ್ಲೆಂಡ್‌ನಲ್ಲಿ ತಮ್ಮ ಕುಟುಂಬದ ಜತೆ ವಾಸವಾಗಿದ್ದಾರೆ. ಅವರು ಹಾಸಿಗೆ ಹಿಡಿದಿರುವ ತಮ್ಮ ಪೋಷಕರನ್ನು ಭೇಟಿಯಾಗಲು ಮುಂಬೈಗೆ ಬಂದಿದ್ದರು. ವೀಣಾ ಸಂತೂರ್ ಕೋ ಆಪರೇಟಿವ್ ಸೊಸೈಟಿಯ 8 ಮಹಡಿಯಲ್ಲಿ ಅಗ್ನಿ ದುರಂತ ಸಂಭವಿಸಿದೆ.

ಈ ಘಟನೆ ನಡೆದಾಗ ಪೌಲ್ ವಾಲ್ತಟಿ ಹಾಗೂ ಅವರ ಪತ್ನಿ ಮತ್ತು ಅವರ ಮಕ್ಕಳು ಮೆಟ್ಟಿಲಿಳಿದು ಕಟ್ಟಡದ ಹೊರಗೆ ಬಂದಿದ್ದಾರೆ. ಆದರೆ ಗ್ಲೋರಿ ಹಾಗೂ ಅವರ ಮಗನಿಗೆ ಬಚಾವಾಗಲು ಸಾಧ್ಯವಾಗಿಲ್ಲ ಎಂದು ವರದಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!