ಮಾಜಿ ಶಾಸಕರಿಗೆ ಒಂದು ಅವಧಿಗೆ ಮಾತ್ರವೇ ಪಿಂಚಣಿ: ಮಹತ್ವದ ನಿರ್ಣಯ ಪ್ರಕಟಿಸಿದ ಪಂಜಾಬ್‌ ಸಿಎಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಶಾಸಕರು ಮತ್ತು ಮಾಜಿ ಶಾಸಕರು ಎಷ್ಟೇ ಬಾರಿ ಗೆದ್ದರೂ ಇನ್ನಮುಂದೆ ಒಂದು ಅವಧಿಯ ಪಿಂಚಣಿನ್ನು ಮಾತ್ರ ಪಡೆಯುತ್ತಾರೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಘೋಷಿಸಿದ್ದಾರೆ.
ಒಬ್ಬ ಶಾಸಕ ಒಂದು ಅವಧಿಗೆ ಶಾಸಕನಾಗಿ ಆಯ್ಕೆಯಾದ್ದಕ್ಕೆ 75 ಸಾವಿರ ಪಿಂಚಣೆ ಪಡೆಯುತ್ತಾರೆ. 3, 4,5 ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಅವಧಿಗೆ ಶಾಸಕರಾಗಿ ಆಯ್ಕೆಯಾಗುತ್ತಿರುವವರಿಗೆ ಪ್ರತಿಯೊಂದು ಅವಧಿಯದನ್ನು ಸೇರಿ ಲಕ್ಷಾಂತರ ರು. ಪಿಂಚಣಿಯನ್ನು ನೀಡುತ್ತಿರುವುದು ರಾಜ್ಯದ ಬೊಕ್ಕಸಕ್ಕೆ ಹೊರೆಯಾಗುತ್ತಿದೆ. ಹೀಗೆ ಕೆಲವರು 3.50 ಲಕ್ಷದಿಂದ 5.25 ಲಕ್ಷದವರೆಗೆ ಪಿಂಚಣಿ ಪಡೆಯುತ್ತಿದ್ದಾರೆ. ಇದರೊಂದಿಗೆ ಕೆಲವರು ಸಂಸತ್ತಿನ ಸದಸ್ಯರಾಗಿಯೂ ಸೇವೆ ಸಲ್ಲಿಸಿ ಅಲ್ಲಿಯ ಪಿಂಚಣಿಯನ್ನೂ ಜೊತೆಗೆ ಪಡೆಯುತ್ತಾರೆ. ಆದ್ದರಿಂದ ಇನ್ಮುಂದೆ ಒಬ್ಬರಿಗೆ ಒಂದು ಅವಧಿಗೆ ಮಾತ್ರವೇ ಪಿಂಚಣಿ ನೀಡಲಾಗುವುದು ಎಂದು ಪಂಜಾಬ್‌ ಮುಖ್ತಮಂತ್ರಿ ಭಗವಂತ ಮಾನ್‌ ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷವು ಕಳೆದ ವಿಧಾನಸಭೆಯಲ್ಲಿ ಪಕ್ಷ ವಿರೋಧ ಪಕ್ಷದಲ್ಲಿದ್ದಾಗ ಸಹ ಒಬ್ಬ ಶಾಸಕರಿಗೆ ಒಂದು ಪಿಂಚಣಿ’ ಮಾತ್ರವೇ ನೀಡುವಂತೆ ಬೇಡಿಕೆಯಿಟ್ಟಿತ್ತು. ಇದರ ಜೊತೆಗೆ ಶಾಸಕರ ಕುಟುಂಬಗಳಿಗೆ ನೀಡುವ ಭತ್ಯೆಯಲ್ಲಿಯೂ ಕಡಿತಗೊಳಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!