ತೆರೆಗೆ ಬರಲಿದೆ ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್ ಕುರಿತ ಬಯೋಪಿಕ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚೆಗೆ ಸಾಕಷ್ಟು ಬಯೋಪಿಕ್‌ಗಳು ತಯಾರಾಗುತ್ತಿವೆ. ರಾಜಕೀಯ, ಕ್ರೀಡೆ, ಸಿನಿಮಾ ಹೀಗೆ ನಾನಾ ಕ್ಷೇತ್ರಗಳಲ್ಲಿ ಹೆಸರು ಮಾಡಿರುವವರ ಜೀವನ ಚರಿತ್ರೆಯನ್ನು ಬಿಗ್ ಸ್ಕ್ರೀನ್ ಮೇಲೆ ತರುವ ಕೆಲಸ ನಡೆಯುತ್ತಿದೆ. ಇದೀಗ ದಿವಂಗತ ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್ ಜೀವನಚರಿತ್ರೆಯ ಚಿತ್ರ ಬಿಡುಗಡೆ ಮಾಡಲು ‘ಆಹಾ’ ಒಟಿಟಿ ಪ್ಲಾಟ್​ಫಾರ್ಮ್ ಮುಂದಾಗಿದೆ. ಇದಕ್ಕೆ ‘ಹಾಫ್ ಲಯನ್’ ಎಂದು ಟೈಟಲ್ ಇಡಲಾಗಿದೆ.

1991 ರಿಂದ 1996 ರವರೆಗೆ ಪಿ.ವಿ. ನರಸಿಂಹರಾವ್ ಪ್ರಧಾನಿಯಾಗಿದ್ದರು. ಅವರು ದೇಶದ ಒಂಬತ್ತನೇ ಪ್ರಧಾನಿ. ಚುನಾವಣೆಗಳಲ್ಲಿ ಕಾಂಗ್ರೆಸ್ ಭಾರಿ ಬಹುಮತದೊಂದಿಗೆ ಪಿ.ವಿ. ನರಸಿಂಹರಾವ್ ಪ್ರಧಾನಿಯಾದರು. 1990 ರ ದಶಕದಲ್ಲಿ ಭಾರತದ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಇದೀಗ ಅವರ ಬಯೋಪಿಕ್ ಬರುತ್ತಿರುವುದರಿಂದ ಅವರ ಅನುಯಾಯಿಗಳಿಗೆ ಖುಷಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!