ಪಂಜಾಬ್‌ ಸಿಎಂ ಭಗವಂತ್‌ ಮಾನ್‌ಗೆ ಮಾಜಿ ಪತ್ನಿ ಬೆದರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ವಿರುದ್ಧ ಪುತ್ರಿ ಸೀರತ್ ಮಾನ್ ಆರೋಪ ಮಾಡಿದ್ದ ಬೆನ್ನಲ್ಲೇ ಮಾನ್ ಅವರ ಮಾಜಿ ಪತ್ನಿ ಪ್ರೀತ್ ಗ್ರೆವಾಲ್ ಅವರು ಮಾನ್‌ ಸಾಹೇಬ್ ಅವರು ಮದ್ಯ ಸೇವಿಸಿ ಬೆತ್ತಲೆಯಾಗಿ ನೃತ್ಯ ಮಾಡುತ್ತಿರುವ ವೀಡಿಯೊಗಳನ್ನು ಶೀಘ್ರದಲ್ಲೇ ಪೋಸ್ಟ್ ಮಾಡುವುದಾಗಿ ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ಬೆದರಿಕೆ ಹಾಕಿದ್ದಾರೆ.

ಫೇಸ್‌ಬುಕ್ ಪೋಸ್ಟ್‌ನಲ್ಲಿ, ಪ್ರೀತ್ ಗ್ರೆವಾಲ್, ನಾನು ಇದನ್ನು ಪ್ರಾರಂಭ ಮಾಡಿದ್ದಲ್ಲ ಆದರೆ, ಇದನ್ನು ಹೇಗೆ ನಡೆಸಬೇಕು ಎನ್ನುವುದು ನನಗೆ ಗೊತ್ತಿದೆ. ನನ್ನ ಫೇಸ್‌ ಬುಕ್‌ ಪುಟಕ್ಕೆ ಟ್ಯೂನ್‌ ಆಗಿದೆ. ಭಗವಂತ್ ಮಾನ್ ಮದ್ಯ ಸೇವಿಸಿ ಬೆತ್ತಲೆಯಾಗಿ ಡ್ಯಾನ್ಸ್ ಮಾಡಿರುವ ವಿಡಿಯೋವನ್ನು ಶೇರ್ ಮಾಡುತ್ತೇನೆ ಎಂದು ಪ್ರೀತ್ ಗ್ರೆವಾಲ್ ಪಂಜಾಬಿ ಭಾಷೆಯಲ್ಲಿ ಬರೆದುಕೊಂಡಿದ್ದಾರೆ.

ಶಿರೋಮಣಿ ಅಕಾಲಿದಳದ(ಎಸ್‌ಎಡಿ) ನಾಯಕ ಬಿಕ್ರಮ್ ಮಜಿಥಿಯಾ ಸಾಮಾಜಿಕ ಮಾಧ್ಯಮದಲ್ಲಿ ಶನಿವಾರ ಸೀರತ್ ಮಾನ್ ಅವರು ಪೋಸ್ಟ್ ಮಾಡಿದ ವಿಡಿಯೋನ್ನು ಮತ್ತು ಪ್ರೀತ್ ಗ್ರೆವಾಲ್ ಅವರ ಪೋಸ್ಟ್ ಅನ್ನು ಬಹಿರಂಗಪಡಿಸಿದ್ದಾರೆ. ಮಾನ್ ತನ್ನ ಪೋಷಕ ಕರ್ತವ್ಯಗಳಲ್ಲಿ ವಿಫಲರಾದರೆ ಮಾನ್ ಅವರ ಇಬ್ಬರು ಮಕ್ಕಳನ್ನು ಸಾಕು ತಂದೆಯಾಗಿ ನೋಡಿಕೊಳ್ಳಲು ಮಜಿಥಿಯಾ ತನ್ನ ಇಚ್ಛೆಯನ್ನು ವ್ಯಕ್ತಪಡಿಸಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!