ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೊಲೀಸ್ ಕಮಿಷನರ್ ಕಚೇರಿಯಿಂದ ಕಾರ್ಯ ನಿರ್ವಹಿಸುತ್ತಿರುವ 112 ತುರ್ತು ಸಹಾಯವಾಣಿಗೆ ಈ ವರ್ಷ ಅತಿಯಾಗಿ ಕ್ರಾಂಕ್ ಕಾಲ್‌ಗಳು ಬಂದಿವೆ.
ಈ ಬಗ್ಗೆ ಇಂಟಿಗ್ರೇಟೆಡ್ ಕಮಾಂಡ್ ಹಾಗೂ ಕಂಟ್ರೋಲ್ ಸೆಂಟರ್ ಅಂಕಿ ಅಂಶ ಬಿಡುಗಡೆಮಾಡಿದ್ದು, ಜನವರಿಯಿಂದ ಮಾರ್ಚ್‌ನಲ್ಲಿ ಒಟ್ಟಾರೆ 699 ಕ್ರಾಂಕ್ ಕರೆಗಳನ್ನು ಸ್ವೀಕರಿಸಲಾಗಿದೆ.
ಅಷ್ಟಕ್ಕೂ ಕ್ರಾಂಕ್ ಕಾಲ್ಸ್ ಅಂದರೇನು?
ಕ್ರಾಂಕ್ ಕರೆಗಳು ಅಂದರೆ ಸಾಮಾನ್ಯ ದೂರಿನ ಕರೆಗಳಲ್ಲ. ಸುಮ್ಮನೆ ಟೈಮ್ ಪಾಸ್‌ಗೆ ಅಥವಾ ಮಜಕ್ಕಾಗಿ ಬರುವ ಕಾಲ್‌ಗಳು. ನಿಜವೇನೋ ಎಂಬಂತೆ ಇವರು ಸುಳ್ಳು ದೂರು ದಾಖಲಿಸುತ್ತಾರೆ. ಇಲಾಖೆಯ ಅಮೂಲ್ಯ ಸಮಯವನ್ನು ವೇಸ್ಟ್ ಮಾಡುತ್ತಾರೆ. ಇದರಲ್ಲಿ ಶೇ.99ರಷ್ಟು ಪುರುಷರೇ!
ಹೆಚ್ಚು ಮಂದಿ ಕುಡಿದಿರುತ್ತಾರೆ. ಕರೆ ಮಾಡುವ ಹೆಂಗಸರು ಮಾನಸಿಕ ತೊಂದರೆ ಅನುಭವಿಸಿರುತ್ತಾರೆ ಎನ್ನಲಾಗಿದೆ. ಕರೆ ಮಾಡಿ ಸಿಬ್ಬಂದಿಗೆ ಕೆಟ್ಟ ಪದಗಳಿಂದ ನಿಂದಿಸುತ್ತಾರೆ. ಒಂದು ಬಾರಿ ಒಬ್ಬ ಪುರುಷ ಒಂದೇ ದಿನದಲ್ಲಿ 60 ಬಾರಿ ಕರೆ ಮಾಡಿದ್ದ ಎಂದು ಹೇಳಲಾಗಿದೆ.