ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಗನಕ್ಕೇರಿದ್ದ ಅಕ್ಕಿದರ ಇಳಿಕೆ ಕಂಡಿದೆ. ಸ್ಟೀಮ್ ರೈಸ್ ಅಕ್ಕಿದರ ಕಡಿಮೆಯಾಗಿದ್ದು. Raw ರೈಸ್ ದರ ಯಥಾ ಸ್ಥಿತಿಯಲ್ಲಿ ಮುಂದುವರೆದಿದೆ.
ಬೇಸಿಗೆ ಬೆಳೆ ಬಂದಿರುವುದರಿಂದ, ಅಕ್ಕಿ ಬೆಲೆ ಕೊಂಚ ಇಳಿಕೆಯಾಗಿದೆ. ಸ್ಟೀಮ್ ರೈಸ್ ಅಕ್ಕಿಯ ಪ್ರಮಾಣ ಕಡಿಮೆಯಾದರೂ ಅದನ್ನು ಎಲ್ಲರೂ ಬಳಸೋದಿಲ್ಲ. ಹೆಚ್ಚಿನ ಹೋಟೆಲ್‌ಗಳು ಸ್ಟೀಮ್ ರೈಸ್ ಅನ್ನು ಬಳಸುತ್ತವೆ. ಬೆಲೆ ಇಳಿಕೆ ತಾತ್ಕಾಲಿಕ ಎಂದು ವರದಿಯಾಗಿದೆ.
ಸ್ಟೀಮ್ ರೈಸ್ ಬೆಲೆ ಕೆಜಿಗೆ 8 ರೂ.ಗೆ ಇಳಿದಿದೆ. ಕಳೆದ ಫೆಬ್ರವರಿಯಲ್ಲಿ ಅಕ್ಕಿಯ ಬೆಲೆ ಕೆಜಿಗೆ 57-58 ರೂ. ಇತ್ತು ಈಗ 48-49 ರೂಪಾಯಿ ಆಗಿದೆ. ಸೋನಾ ಸ್ಟೀಮ್ ರೈಸ್ ಕೆಜಿಗೆ 56 ರೂ. ನಿಂದ 47 ರೂ. ಇಳಿಕೆಯಾಗಿದ್ದು, Raw ರೈಸ್ ಬೆಲೆ 55-57 ರೂ. ಇದೆ.