ಕಳೆಗಟ್ಟಿದ ಹೋಳಿ ಸಂಭ್ರಮ: ಬಣ್ಣದಲ್ಲಿ ಮಿಂದೆದ್ದ ಕೋಟೆನಾಡಿನ ಮಂದಿ

ಹೊಸದಿಗಂತ ವರದಿ, ಬಾಗಲಕೋಟೆ
ಕಳೆದ ಎರಡು ವರ್ಷಗಳಿಂದ ಕೋವಿಡ್ದಿಂದ ಕಳೆಗುಂದಿದ್ದ ಹೋಳಿ ಹಬ್ಬದ ಬಣ್ಣದಾಟಕ್ಕೆ ಮೊದಲ ದಿನ ಜಿಲ್ಲೆಯಲ್ಲಿ ಸಂಭ್ರಮದಿಂದ ಚಾಲನೆ ದೊರೆಯಿತು. ಪ್ರಥಮ ಬಾರಿ ವಿದ್ಯಾಗಿರಿ, ನವನಗರದಲ್ಲಿ ನಡೆದ ಬಣ್ಣದಾಟ ಅದ್ದೂರಿಯಾಗಿ ಯಶಸ್ಸು ಕಂಡಿತು.
ಹೋಳಿ ಹಬ್ಬದ ಅಂಗವಾಗಿ ಜಿಲ್ಲೆಯಾದ್ಯಂತ ಬಣ್ಣದಾಟದಲ್ಲಿ ಜನ ಸಂಭ್ರಮದಿಂದ ಭಾಗವಹಿಸಿದ್ದರು. ಚಿಕ್ಕವರಿಂದ ದೊಡ್ಡವರಾದಿಯಾಗಿ ಎಲ್ಲರಗೂ ಬಣ್ಣದಲ್ಲಿ ಮಿಂದೆದ್ದರು. ಇನ್ನೂ ಮಹಿಳೆಯರೂ ಕೂಡ ಪುರುಷರಂತೆ ಪರಸ್ಪರ ಬಣ್ಣ ಎರಚುವ ಮೂಲಕ ಸಂತಸಪಟ್ಟರು.
ವಿದ್ಯಾಗಿರಿ- ನವನಗರದಲ್ಲಿ ಪ್ರಥಮ ಬಾರಿ ಬಣ್ಣದಾಟ
 ಈ ಭಾರಿ ಹೋಳಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸುವ ಮೂಲಕ ಬಾಗಲಕೋಟೆಯ ಹೋಳಿ ಹಬ್ಬಕ್ಕೆ ಇನ್ನಷ್ಟು ಮೆರಗು ನೀಡುವ ನಿಟ್ಟಿನಲ್ಲಿ ಹೋಳಿ ಆಚರಣಾ ಸಮಿತಿಯವರು ನವನಗರ ಮತ್ತು ವಿದ್ಯಾಗಿರಿಯಲ್ಲಿ ಪ್ರಥಮ ಬಾರಿಗೆ ಬಣ್ಣದ ಗಾಡಿಗಳನ್ನು ಓಡಿಸಿದ್ದು ಯಶಸ್ಸು ಕಂಡಿತು.

ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದ ಜನ
ನವನಗರದ ಸೆಕ್ಟರ್ ನಂ.34ರ  ಜಿವೇಶ್ವರ ದೇವಸ್ಥಾನದಿಂದ ಪ್ರಾರಂಭಗೊಂಡ ಬಣ್ಣದ ಬ್ಯಾರಲ್ ತುಂಬಿದ ಟ್ರ್ಯಾಕ್ಟರ್‌ ಗಳು, ಎತ್ತಿನ ಗಾಡಿಗಳು ಒಂದು ಮಾರ್ಗದಲ್ಲಿ ಸಂಚರಿಸಿದರೆ ಇನ್ನೊಂದೆಡೆ ವಿದ್ಯಾಗಿರಿಯ 6ನೇ ಕ್ರಾಸ್ದಿಂದ ಬಣ್ಣದ ಬ್ಯಾರಲ್ ತುಂಬಿದ ಟ್ರ್ಯಾಕ್ಟರ್ ಗಳು ಹೊರಟವು. ರಸ್ತೆಯ ಇಕ್ಕೆಲುಗಳಲ್ಲಿ ನಿಂತಿದ್ದ ಜನರಿಗೆ ಬಣ್ಣದ ನೀರಿನಿಂದ ಎರಚಿದರು. ನಂತರ ವಿದ್ಯಾಗಿರಿಯ ಬಸವೇಶ್ವರ ಇಂಜಿನೀಯರಿಂಗ್ ಕಾಲೇಜಿನಲ್ಲಿ ಎರಡೂ ಮಾರ್ಗದಿಂದ ಬಂದ ಬಣ್ಣದ ಗಾಡಿಗಳು ಪರಸ್ಪರ ಒಗ್ಗೂಡಿದ್ದು, ಈ ವೇಳೆ ಬಣ್ಣದ ಹಬ್ಬದ ಸಂಭ್ರಮ ಮೇಳೈಸಿತ್ತು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!