Exit Poll 2024 | ಈ ಬಾರಿ ಕರ್ನಾಟಕದಲ್ಲಿ ಬಿಜೆಪಿಗೆ ನಷ್ಟ, ಕಾಂಗ್ರೆಸ್​ಗೆ ಲಾಭ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕ ಸಭಾ ಚುನಾವಣೆಯಲ್ಲಿ ಈ ಬಾರಿ ಕರ್ನಾಟಕದಲ್ಲಿ ಫಲಿತಾಂಶದಲ್ಲಿ 18 ಸೀಟುಗಳು ಬಿಜೆಪಿಗೆ ದೊರೆಯಲಿದ್ದು, 8 ಸ್ಥಾನಗಳು ಕಾಂಗ್ರೆಸ್​ಗೆ ದೊರೆಯಲಿವೆ ಎಂದು ಪೋಲ್​​ ಸ್ಟಾಟ್ ಹೇಳಿದೆ. ಜೆಡಿಎಸ್​​ ರೀತಿ ಸ್ಪರ್ಧಿಸಿರುವ ಒಟ್ಟು 3ರಲ್ಲಿ ಎರಡು ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆಗಳು ಹೇಳಿವೆ.

ದೇಶಾದ್ಯಂತ ಬಿಜಪಿಗೆ ಹಿಂದಿಗಿಂತ ಹೆಚ್ಚು ಸೀಟುಗಳು ಸಿಗಲಿವೆ ಎಂಬ ಟ್ರೆಂಡ್ ಇರುವ ಹೊರತಾಗಿಯೂ ಕರ್ನಾಟಕದಲ್ಲಿ ಸ್ವಲ್ಪ ಮಟ್ಟಿಗೆ ಬಿಜೆಪಿಗೆ ಹಿನ್ನಡೆಯಾಗಿದೆ.
2019ರಲ್ಲಿ ಕರ್ನಾಟಕದ 28 ಕ್ಷೇತ್ರಗಳಲ್ಲಿ ಬಿಜೆಪಿ 25 ಸ್ಥಾನಗಳನ್ನು ಗೆದ್ದಿದ್ದರೆ ಕಾಂಗ್ರೆಸ್ ಹಾಗೂ ಜೆಡಿಎಸ್​ ತಲಾ ಒಂದು ಸ್ಥಾನವನ್ನು ಹಂಚಿಕೊಂಡಿತ್ತು. ಪಕ್ಷೇತರರಾದ ಸುಮಲತಾ ಅವರು ಮಂಡ್ಯ ಕ್ಷೇತ್ರದಲ್ಲಿ ಗೆದ್ದಿದ್ದರು.

ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿ 20ರಿಂದ 22, ಕಾಂಗ್ರೆಸ್ 3ರಿಂದ 5 ಮತ್ತು ಜೆಡಿಎಸ್ 3 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ .

ಇಂಡಿಯಾ ಟುಡೆ ಪ್ರಕಾರ ಕರ್ನಾಟದಲ್ಲಿ ಬಿಜೆಪಿಗೆ 23ರಿಂದ 25 ಹಾಗೂ ಕಾಂಗ್ರೆಸ್​ಗೆ 04ರಿಂದ 05 ಹಾಗೂ ಜೆಡಿಎಸ್​ಗೆ 1ರಿಂದ 3ಸ್ಥಾನ ಸಿಗಲಿದೆ ಎಂದು ಅಂದಾಜಿಸಿದೆ.

ಜನ್​ಕಿ ಬಾತ್​ ಸಮೀಕ್ಷೆ ಪ್ರಕಾರ ಬಿಜೆಪಿಗೆ 17ರಿಂದ 23 ಹಾಗೂ ಕಾಂಗ್ರೆಸ್​ಗೆ 4ರಿಂದ 8 ಹಾಗೂ ಜೆಡಿಎಸ್​ಗೆ 1ರಿಂದ 2 ಸ್ಥಾನ ಸಿಗಬಹುದು ಅಂದಾಜಿಸಿದೆ.

ಜಿ ನ್ಯೂಸ್ ಪ್ರಕಾರ ಬಿಜೆಪಿಗೆ 18ರಿಂದ22, ಕಾಂಗ್ರೆಸ್​ಗೆ 4ರಿಂದ 5 ಹಾಗೂ ಜೆಡಿಎಸ್​​ 01ರಿಂದ 3 ಸೀಟುಗಳು ಸಿಗಲಿವೆ.

ಸಿಎನ್‌ಎನ್‌: ಬಿಜೆಪಿ 21 – 24, ಕಾಂಗ್ರೆಸ್ 3 – 7, ಜೆಡಿಎಸ್ 1 – 2 ಸೀಟ್‌ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!