Exit Polls 2022: ಯುಪಿಗೆ ಬಿಜೆಪಿ, ಪಂಜಾಬ್‌ ಗೆ ಆಪ್ ಪಕ್ಕಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಪ್ರದೇಶದಲ್ಲಿ ಇಂದು ಅಂತಿಮ ಹಂತದ ಮತದಾನ ಮುಗಿದಿದ್ದು, ಇದರ ಬೆನ್ನೆಲ್ಲೇ ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗಿದೆ.
ಪಂಚರಾಜ್ಯಗಳಾದ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್‌, ಗೋವಾ, ಮಣಿಪುರ ವಿಧಾನಸಭಾ ಕ್ಷೇತ್ರಗಳ ಗೆಲುವಿನ ಲೆಕ್ಕಾಚಾರವಾಗಿದೆ.

ಉತ್ತರ ಪ್ರದೇಶ 
ಉತ್ತರ ಪ್ರದೇಶದಲ್ಲಿ ಮತ್ತೆ ಬಿಜೆಪಿ ಪಕ್ಷ ಅದಿಕಾರದ ಗದ್ದುಗೆ ಏರುವ ಮೂಲಕ ಯೋಗಿ ಮತ್ತೆ ಸಿಎಂ ಅಗಲಿದ್ದಾರೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ.
ರಿಪಬ್ಲಿಕ್‌ ಟಿ.ವಿ
ಬಿಜೆಪಿ: 262-277 , ಎಸ್‌ಪಿ: 119-134, ಬಿಎಸ್‌ಪಿ: 07-09, ,ಕಾಂಗ್ರೆಸ್: 03-08, ಇತರರು: 02-06.
ಪಿ-ಮಾರ್ಕ್‌
ಬಿಜೆಪಿ-240, ಎಸ್‌ಪಿ+-140, ಬಿಎಸ್‌ಪಿ-17, ಕಾಂಗ್ರೆಸ್-04, ಇತರೆ-02.
ಪೋಲ್‌ಸ್ಟ್ರೈಟ್‌
ಬಿಜೆಪಿ-211- 225, ಎಸ್‌ಪಿ+-146-160, ಬಿಎಸ್‌ಪಿ-14-24, ಕಾಂಗ್ರೆಸ್-4-06 ‌, ಇತರೆ-00
ಸಿಎನ್‌ಎನ್‌ ನ್ಯೂಸ್‌ 18
ಬಿಜೆಪಿ 262–277, ಕಾಂಗ್ರೆಸ್‌ 3–8, ಎಸ್‌ಪಿ+ 119–134, ಬಿಎಸ್‌ಪಿ 7–15
ಇಟಿಜಿ ರಿಸರ್ಚ್‌
ಬಿಜೆಪಿ 230–245, ಕಾಂಗ್ರೆಸ್‌ 2–6, ಎಸ್‌ಪಿ+ 150–165, ಬಿಎಸ್‌ಪಿ 5–10.
ನ್ಯೂಸ್‌ ಎಕ್ಸ್‌– ಪೋಲ್‌ಸ್ಟರ್‌
ಬಿಜೆಪಿ 211–245, ಕಾಂಗ್ರೆಸ್‌ 4–6, ಎಸ್‌ಪಿ+ 146–160, ಬಿಎಸ್‌ಪಿ 14–24.
ಸಿ-ವೋಟರ್:
ಬಿಜೆಪಿ: 161, ಎಸ್‌ಪಿ: 141, ಬಿಎಸ್‌ಪಿ: 87, ಇತರರು: 14.
ಟುಡೇಸ್‌ ಚಾಣಕ್ಯ:
ಬಿಜೆಪಿ: 285, ಎಸ್‌ಪಿ: 88, ಬಿಎಸ್‌ಪಿ: 27 , ಇತರರು: 03.
ಇಂಡಿಯಾ ಟುಡೇ:
ಬಿಜೆಪಿ: 251-279, ಎಸ್‌ಪಿ: 88-112, ಬಿಎಸ್‌ಪಿ: 28-42, ಇತರರು: 6-16.

ಪಂಜಾಬ್ ವಿಧಾನಸಭಾ ಚುನಾವಣೆ
ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಗೆಲುವು ಸಾಧಿಸುವ ಮೂಲಕ ಸರ್ಕಾರ ರಚಿಸವು ಸೂಚನೆ ನೀಡಿದೆ.
ಬಹುತೇಕ ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಆಮ್ ಆದ್ಮಿ ಪಾರ್ಟಿ ಅಭೂತ ಪೂರ್ವ ಗೆಲುವು ಸಾಧಿಸಿದೆ. ದೆಹಲಿಯಲ್ಲಿ ಅಧಿಕಾರದಲ್ಲಿರುವ ಆಮ್ ಆದ್ಮಿ ಪಾರ್ಟಿ ಇದೀಗ ಮತ್ತೊಂದು ರಾಜ್ಯದಲ್ಲಿ ಅಧಿಕಾರಕ್ಕೇರುವುದು ಬಹುತೇಕ ಖಚಿತವಾಗಿದೆ. ಇನ್ನು ಆದರೆ ಆಡಳಿತರೂಢ ಕಾಂಗ್ರೆಸ್ ಎರಡನೇ ಪಕ್ಷವಾಗಲಿದೆ ಎಂದಿದೆ.
ಜನ್‌ಕಿ ಬಾತ್ ಸಮೀಕ್ಷೆ
ಆಮ್ ಆದ್ಮಿ ಪಾರ್ಟಿ: 60 -80, ಕಾಂಗ್ರೆಸ್: 18 -31, ಶಿರೋಮಣಿ ಅಕಾಲಿ ದಳ+ 12 – 19, ಬಿಜೆಪಿ+ 03 – 7.
ಇಂಡಿಯಾ ಟುಡೆ ಆಕ್ಸಿಸ್
ಆಮ್ ಆದ್ಮಿ ಪಾರ್ಟಿ: 76-90, ಕಾಂಗ್ರೆಸ್:19-31, ಬಿಜೆಪಿ+: 1-4, ಶಿರೋಮಣಿ ಅಕಾಲಿ ದಳ+: 7-11.
ಎಬಿಪಿ ಸಿ ವೋಟರ್
ಆಮ್ ಆದ್ಮಿ ಪಾರ್ಟಿ: 51-61, ಕಾಂಗ್ರೆಸ್:22-28 , ಶಿರೋಮಣಿ ಅಕಾಲಿ ದಳ:20-26, ಬಿಜೆಪಿ: 7-13 , ಇತರರು: 1-5.
ಚಾಣಾಕ್ಯ
ಆಮ್ ಆದ್ಮಿ ಪಾರ್ಟಿ: 100, ಕಾಂಗ್ರೆಸ್ : 10 , ಬಿಜೆಪಿ: 1, ಅಕಾಲಿ ದಳ: 6.
ಟೈಮ್ಸ್ ನೌ
ಆಮ್ ಆದ್ಮಿ ಪಾರ್ಟಿ:70, ಕಾಂಗ್ರೆಸ್ : 22, ಬಿಜೆಪಿ: 5 , ಶಿರೋಮಣಿ ಅಕಾಲಿ ದಳ: 19

ಗೋವಾ
ಗೋವಾದಲ್ಲಿ ಆಡಳಿತಾರೂಢ ಬಿಜೆಪಿ ಹಾಗು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಅತಂತ್ರ ಫಲಿತಾಂಶ ಕಾಣುವ ಸಾಧ್ಯತೆಯನ್ನು ಸಮೀಕ್ಷೆ ಹೇಳುತ್ತಿದೆ.
ಇದೇ ಮೊದಲ ಬಾರಿಗೆ ಬಿಜೆಪಿ ಎಲ್ಲಾ 40 ಸ್ಥಾನಗಳಲ್ಲಿ ಸ್ಪರ್ಧಿಸಿದೆ.
ಜನ್‌ಕಿ ಬಾತ್ ಸಮೀಕ್ಷೆ 
ಬಿಜೆಪಿ: 17, ಕಾಂಗ್ರೆಸ್+:17, ಆಪ್: 1 , ಇತರರು:1.
ಟೈಮ್ಸ್ ನೌ ಸಮೀಕ್ಷೆ
ಕಾಂಗ್ರೆಸ್ +: 16, ಬಿಜೆಪಿ: 14, ಆಪ್: 4, ಟಿಎಂಸಿ:0, ಇತರರು:6.
ಎಬಿಪಿ ಸಮೀಕ್ಷೆ
ಬಿಜೆಪಿ: 13 -17, ಕಾಂಗ್ರೆಸ್+: 12- 16, ಆಪ್: 1 – 5, ಟಿಎಂಸಿ ಎಂಜಿಪಿ: 5 – 9, ಇತರರು: 0 – 2.
ರಿಪಬ್ಲಿಕ್, P-MARQ ಸಮೀಕ್ಷೆ
ಬಿಜೆಪಿ: 13 -17, ಕಾಂಗ್ರೆಸ್+: 13 – 17, ಆಪ್ 2 – 6, ಟಿಎಂಸಿ ಎಂಜಿಪಿ:2 – 4, ಇತರರು 0 – 4

ಮಣಿಪುರ
ಮಣಿಪುರದಲ್ಲಿ 60 ವಿಧಾನಸಭಾ ಸ್ಥಾನಗಳಿದ್ದು,ಇಲ್ಲಿ ಸರ್ಕಾರ ರಚಿಸಲು 31 ಸ್ಥಾನಗಳಲ್ಲಿ ಪಕ್ಷವೊಂದು ಗೆಲುವು ಸಾಧಿಸಬೇಕಿದೆ. ಇನ್ನು ಮತಗಟ್ಟೆ ಸಮೀಕ್ಷೆಗಳು ಮಣಿಪುರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೇರುವುದು ಖಚಿತ ಎಂದು ಭವಿಷ್ಯ ನುಡಿದಿವೆ.
Zee News-DESIGNBOXED ಸಮೀಕ್ಷೆ
ಬಿಜೆಪಿ: 23-28, ಕಾಂಗ್ರೆಸ್-10-14,
ಇಂಡಿಯಾ ನ್ಯೂಸ್
ಬಿಜೆಪಿ: 23-28, ಕಾಂಗ್ರೆಸ್: 10-14
ಇಂಡಿಯಾ ಟಿವಿ ಗ್ರೌಂಡ್ ಜೀರೋ
ಬಿಜೆಪಿ: 28 ಕಾಂಗ್ರೆಸ್: 15
ಪಿ-ಮಾರ್ಕ್
ಬಿಜೆಪಿ : 31 ಕಾಂಗ್ರೆಸ್: 17
ಇಂಡಿಯಾ ಟುಡೇ
ಬಿಜೆಪಿ: 38 ಕಾಂಗ್ರೆಸ್: 06

ಉತ್ತರಾಖಂಡ
ಉತ್ತರಾಖಂಡದಲ್ಲಿ ಬಿಜೆಪಿ ಹಾಗು ಕಾಂಗ್ರೆಸ್‌ ನಡುವೆ ಅಧಿಕಾರದ ಗದ್ದುಗೆಗೆ ಪೈಪೋಟಿ ನಡೆದಿದ್ದು, ಸಮೀಕ್ಷೆಗಳು ಎರಡು ಪಕ್ಷಗಳ ಪರ ಜನರ ಒಲವು ಇರುವ ಬಗ್ಗೆ ಹೇಳುತ್ತವೆ.
ರಿಪಬ್ಲಿಕ್ 
ಬಿಜೆಪಿ+: 29-34, ಕಾಂಗ್ರೆಸ್‌: 33-38, ಬಿಎಸ್‌ಪಿ: 01-33 , ಇತರೆ: 01-03.
ಈಟಿಜಿ ರಿಸರ್ಚ್
ಬಿಜೆಪಿ+: 37-40, ಕಾಂಗ್ರೆಸ್‌: 29-32, ಬಿಎಸ್‌ಪಿ: 00-01, ಇತರೆ: 01-02.
ಟೈಮ್ಸ್‌ ನೌ
ಬಿಜೆಪಿ-37, ಕಾಂಗ್ರೆಸ್‌-31, ಇತರೆ:02
ಸಿ ವೋಟರ್
ಬಿಜೆಪಿ-26-32, ಕಾಂಗ್ರೆಸ್‌-32-38, ಇತರೆ:00-02.
ಚಾಣಕ್ಯ
ಬಿಜೆಪಿ: 43, ಕಾಂಗ್ರೆಸ್‌: 24, ಇತರೆ: 3.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!