ಭಾರತಕ್ಕೆ ರೀಎಂಟ್ರಿ ಕೊಡುತ್ತಿದೆ ಚೀನಾ ಮೂಲದ ಉಚ್ಚಾಟಿತ TikTok?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದೇಶದಲ್ಲಿ ಯುವಜನತೆಯನ್ನು ತನ್ನತ್ತ ಸೆಳೆದಿದ್ದ ಜನಪ್ರಿಯ ರೀಲ್ಸ್​ ಆ್ಯಪ್​ ಟಿಕ್​ಟಾಕ್​ (TikTok) ಇದೀಗ ಮತ್ತೆ ಭಾರತಕ್ಕೆ ಬರಲಿದೆ.
ಈ ಹಿಂದೆ ಚೀನಾದ ನರಿಬುದ್ಧಿಯಿಂದಾಗಿ ಭಾರತದಲ್ಲಿ ​ ಟಿಕ್​ಟಾಕ್ ಬ್ಯಾನ್ ಆಗಿತ್ತು. ಇದರಿಂದ ರೀಲ್ಸ್​ ಪ್ರಿಯರು ನೊಂದುಕೊಂಡಿದ್ದರು.ಆದರೆ ಇದೀಗ ಮತ್ತೆ ಟಿಕ್​​ಟಾಕ್ ಭಾರತಕ್ಕೆ ವಾಪಸ್ ಆಗಲಿದೆಯಂತೆ.

ಭಾರತದಲ್ಲಿ TikTokನ Byetdance ಕಂಪನಿಯ ಮಾಲೀಕರು ಪುನರ್ ಆರಂಭಿಸುವ ಬಗ್ಗೆ ಕಳೆದ ಒಂದು ತಿಂಗಳ ಹಿಂದೆ ಮುಂಬೈ ಮೂಲದ ಉದ್ಯಮಿಯೊಬ್ಬರ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ .

ಸ್ಕೈಸ್ಪೋರ್ಟ್ಸ್​ನ (Skyesports) ಸಿಇಓ ಶಿವ ನಂದೆ ಜೊತೆ TikTokನ Byetdance ಕಂಪನಿಯ ಮಾಲೀಕರು ಮಾತುಕತೆ ನಡೆದಿದೆ ಎನ್ನಲಾಗಿದೆ.ಹೀಗಾಗಿ ಮತ್ತೆ ಬರಲಿದೆ ಎನ್ನಲಾಗುತ್ತಿದೆ.

2020 ವೇಳೆಗೆ ಚೀನಾ ಆ್ಯಪ್​ ಟಿಕ್​ಟಾಕ್ ಭಾರತದಾದ್ಯಂತ ಆವರಿಸಿಕೊಂಡಿತ್ತು. ಆದರೆ ಭಾರತ ಸರ್ಕಾದ ಭದ್ರತೆಯ ಕಾರಣಕ್ಕೆ ಚೀನಾದ 58 ಆ್ಯಪ್​ಗಳನ್ನ ಬ್ಯಾನ್ ಮಾಡಿತ್ತು.

ಇದೀಗ ಶಿವ ನಂದೆ ಹೇಳಿದ ಪ್ರಕಾರ, ಸದ್ಯದಲ್ಲೇ ಟಿಕ್​ಟಾಕ್ ಭಾರತಕ್ಕೆ ವಾಪಸ್ ಆಗಲಿದೆ ಎಂದಿದ್ದಾರೆ. ವರದಿಗಳ ಪ್ರಕಾರ, ಭಾರತದಲ್ಲಿ ಟಿಕ್​ಟಾಕ್ ಸಕ್ರಿಯಗೊಳಿಸಲು ಎಲ್ಲಾ ಸಿದ್ಧತೆಗಳು ನಡೆದಿವೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!