ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಬಿಸಿಲಿನ ಝಳ ದಿನೇ ದಿನೆ ಹೆಚ್ಚಾಗುತ್ತಿದ್ದು, ಆರೋಗ್ಯದ ಬಗ್ಗೆ ಕಾಳಜಿವಹಿಸುವಂತೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಬಿಸಿಲಿನ ಶಾಖದಿಂದ ನಿರ್ಜಲೀಕರಣ ಹಾಗೂ ಇನ್ನಿತರೆ ಸಮಸ್ಯೆಗಳು ಬಾಧಿಸುವ ಸಾಧ್ಯತೆ ಹೆಚ್ಚಿದೆ. ರಾಜ್ಯದಲ್ಲಿ ಶಾಖ ಸೂಚ್ಯಂಕ ಮಧ್ಯಮ ಸ್ಥಾನದಲ್ಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ತಾಪಮಾನ ಹಾಗೂ ತೇವಾಂಶವನ್ನು ಗಮನದಲ್ಲಿಡಲಾಗಿದೆ.
ಏಪ್ರಿಲ್ ಆರಂಭದಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿಯಷ್ಟಿದ್ದು, ಇದೀಗ ಎರಡು ಮೂರು ಡಿಗ್ರಿಯಷ್ಟು ತಾಪಮಾನ ಹೆಚ್ಚಾಗಿದೆ. ಶಾಖದ ಹೊಡೆತದಿಂದ ಜನರು ಜಾಗೃತವಾಗಬೇಕಿದೆ. ಅದರಲ್ಲಿಯೂ ಮಕ್ಕಳು, ಗರ್ಭಿಣಿಯರು ಹಾಗೂ ವೃದ್ಧರು ಬಿಸಿಗೆ ಹೋಗುವಂತಿಲ್ಲ.
ಬಿಸಿಲಿನಿಂದ ಎದುರಾಗುವ ಮೊದಲ ಸಮಸ್ಯೆ ನಿರ್ಜಲೀಕರಣ, ದೇಹದಲ್ಲಿನ ಎಲೆಕ್ಟ್ರೋಲೈಟ್‌ಗಳ ಅಸಮತೋಲನಕ್ಕೆ ಇದು ಕಾರಣವಾಗುತ್ತದೆ.
ಈ ಬಿಸಿಲಿನಲ್ಲಿ ಆರೋಗ್ಯ ರಕ್ಷಣೆ ಹೇಗೆ?
ಸದಾ ಮನೆಯ ಆಹಾರವನ್ನೇ ಸೇವಿಸಿ, ಒಂದೇ ಬಾರಿಗೆ ಹೊಟ್ಟೆ ತುಂಬಾ ತಿನ್ನುವ ಬದಲು ಆಗಾಗ, ಸಣ್ಣ ಸಣ್ಣ ಆಹಾರ ಸೇವಿಸಿ
ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಿ, ಹಾನಿಕಾರಕ ಸೂರ್ಯನ ಕಿರಣಗಳಿಗೆ ನಿಮ್ಮನ್ನು ನೀವು ಒಡ್ಡಿಕೊಳ್ಳಬೇಡಿ.
ಬೆಳಗ್ಗೆ 10 ರಿಂದ ಸಂಜೆ 4 ರವರೆಗಿನ ಬಿಸಿಲನ್ನು ಅವಾಯ್ಡ್ ಮಾಡಿ, ಮಕ್ಕಳು ಹಾಗೂ ಗರ್ಭಿಣಿಯರು ಈ ಸಮಯದಲ್ಲಿ ಒಳಗೆ ಇದ್ದಷ್ಟು ಒಳ್ಳೆಯದು.
ಮೂರು ವರ್ಷದೊಳಗಿನ ಮಕ್ಕಳನ್ನು ಹಾನಿಕಾರಕ ಸೂರ್ಯನ ಕಿರಣಗಳಿಗೆ ಒಡ್ಡಬೇಡಿ, ಇದರಿಂದಾಗಿ ಚರ್ಮದ ಸಮಸ್ಯೆಗಳು ಹಾಗೂ ನಿರ್ಜಲೀಕರಣ ಮಕ್ಕಳನ್ನು ಕಾಡುತ್ತದೆ.
ಕೆಫೀನ್ ಹಾಗೂ ಮದ್ಯಪಾನ ನಿಲ್ಲಿಸಿ
ದಿನಕ್ಕೆ 2-3 ಲೀಟರ್ ನೀರು ಕಡ್ಡಾಯವಾಗಿ ಕುಡಿಯಿರಿ
ಮಕ್ಕಳಿಗೆ ಕಾಟನ್ ಬಟ್ಟೆಗಳನ್ನು ತೊಡಿಸಿ
ಹೊರಗಿನ ತಿಂಡಿಗಳು, ಕರಿದ ಪದಾರ್ಥಗಳು ಹಾಗೂ ಜಂಕ್ ಫುಡ್ ಅವಾಯ್ಡ್ ಮಾಡಿ
ಮನೆಯಲ್ಲಿರಲಿ, ಹೊರಗೇ ಇರಲಿ ಸನ್‌ಸ್ಕ್ರೀನ್ ಬಳಕೆ ಮಾಡಿ
ಹಣ್ಣು, ತರಕಾರಿ, ಮೊಳಕೆ ಕಾಳುಗಳ ಸೇವನೆ ಮಾಡಿ