ತುರ್ತಾಗಿ ನವಜಾತ ಶಿಶುಗಳಿಗೆ Antibiotics ಕಂಡು ಹಿಡಿಯುವ ಅಗತ್ಯವಿದೆ ಎನ್ನುತ್ತಿದ್ದಾರೆ ತಜ್ಞರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ನವಜಾತ ಶಿಶುಗಳಿಗೆ ತುರ್ತಾಗಿ ಆಂಟಿಬಯೋಟಿಕ್ಸ್‌ ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ನವಜಾತ ಶಿಶುಗಳಲ್ಲಿ ರೋಗನಿರೋಧಕತೆಯು ಅಷ್ಟಾಗಿ ಇರುವುದಿಲ್ಲವಾದ್ದರಿಂದ ಅವರು ವೈರಾಣುಗಳ ವಿರುದ್ಧ ಹೋರಾಡಲು ದುರ್ಬಲರಾಗಿರುತ್ತಾರೆ. ಈ ರೀತಿ ಪ್ರತಿಜೀವಕ ನಿರೋಧಕತೆಗೆ ಗುರಿಯಾಗುವ ಸಂಖ್ಯೆಯು ಭಾರತ ಸೇರಿದಂತೆ ಪ್ರಮುಖ ಜಾಗತಿಕ ದೇಶಗಳಲ್ಲಿಯೂ ಇದೆ. ಒಂದು ಅಂದಾಜಿನ ಪ್ರಕಾರ ಪ್ರತಿವರ್ಷ 2.3 ಮಿಲಿಯನ್ ನವಜಾತ ಶಿಶುಗಳು ತೀವ್ರವಾದ ಬ್ಯಾಕ್ಟೀರಿಯಾದ ಸೋಂಕಿನಿಂದ ಸಾಯುತ್ತವೆ ಎಂದು ತಜ್ಞರು ವಿಶ್ವ ಆರೋಗ್ಯ ಸಂಸ್ಥೆಯ ಬುಲೆಟಿನ್‌ನಲ್ಲಿ ಪ್ರಕಟಿಸಿದ ವರದಿಯಲ್ಲಿ ತಿಳಿಸಿದ್ದಾರೆ.

ವೈದ್ಯಕೀಯ ಸಂಶೋಧನೆಯಲ್ಲಿ ಗಣನೀಯ ಪ್ರಗತಿ ಮತ್ತು ತಡೆಗಟ್ಟಬಹುದಾದ ರೋಗಗಳಿಂದ ಸಾಯುವ ಐದು ವರ್ಷದೊಳಗಿನ ಮಕ್ಕಳ ಸಂಖ್ಯೆಯಲ್ಲಿ ಕಡಿದಾದ ಕುಸಿತದ ಹೊರತಾಗಿಯೂ, ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದಂತೆ ಇನ್ನೂ ಅನೇಕ ಸಮಸ್ಯೆಗಳನ್ನು ನಿಭಾಯಿಸಬೇಕಿದೆ. ಅವುಗಳಲ್ಲಿ ತೀವ್ರವಾದ ಬ್ಯಾಕ್ಟೀರಿಯಾದ ಸೋಂಕುಗಳು ಒಂದು. ಇತ್ತೀಚೆಗೆ ಮಕ್ಕಳಲ್ಲಿ ರೋಗನಿರೋಧಕತೆ ಬೆಳೆಯುತ್ತಿದೆ ಎಂಬುದು ಹೌದಾದರೂ ಸೋಂಕಿಗೆ ತುತ್ತಾಗಿ ತೊಂದರೆಗೊಳಗಾಗುವ ಮಕ್ಕಳ ಸಂಖ್ಯೆಯೂ ಅಷ್ಟೇ ಇದೆ.

2000ನೇ ಇಸವಿಯಿಂದ ವಯಸ್ಕರಿಗೆ ಬಳಸಲು 40ಕ್ಕೂ ಅಧಿಕ ಪ್ರತಿಜೀವಕಗಳನ್ನು ಸನುಮೋದಿಸಲಾಗಿದೆ. ಆದರೆ ನವಜಾತ ಶಿಶುಗಳಿಗೆ ಕೇವಲ ನಾಲ್ಕು ಪ್ರತಿಜೀವಕಗಳನ್ನು ಮಾತ್ರ ಹೊರತರಲಾಗಿದೆ. ನವಜಾತ ಶಿಶುಗಳಲ್ಲಿ ಬ್ಯಾಕ್ಟೀರಿಯಾ ಸೋಂಕಿನ ಪ್ರಮಾಣ ಹೆಚ್ಚಿರುವುದರಿಂದ ಸೂಕ್ತ ಪ್ರತಿಜೀವಕ ಅಗತ್ಯವಿದೆ. ಹಾಗಾಗಿ “ಮಕ್ಕಳಲ್ಲಿ ಯಾವುದು ಉತ್ತಮವಾಗಿ ಮತ್ತು ಸುರಕ್ಷಿತವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಹೆಚ್ಚಿನ ಆದ್ಯತೆಯ ಪ್ರತಿಜೀವಕಗಳನ್ನು ಗುರುತಿಸುವ ತುರ್ತು ಅವಶ್ಯಕತೆಯಿದೆ” ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!