ಸಿಡಿದೆದ್ದ ತೈವಾನ್: ಮೊದಲ ಬಾರಿಗೆ ಜಗತ್ತಿನೆದುರು ಎಫ್-16ವಿ ಫೈಟರ್‌ಜೆಟ್ ಅನಾವರಣ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಆ.17ರ ರಾತ್ರಿ ತೈವಾನ್ ಇದೇ ಮೊದಲ ಬಾರಿಗೆ ಕ್ಷಿಪಣಿಗಳನ್ನು ಹೊತ್ತಿರುವ ಅತ್ಯಾಧುನಿಕ ಎಫ್-16ವಿ ಫೈಟರ್‌ಜೆಟ್ ಯುದ್ಧವಿಮಾನವನ್ನು ಜಗತ್ತಿನ ಎದುರು ಅನಾವರಣಗೊಳಿಸಿದೆ. ರಾತ್ರೋರಾತ್ರಿ ಯುದ್ಧವಿಮಾನದ ಪ್ರಾತ್ಯಕ್ಷಿಕೆ ನಡೆದಿದ್ದು, ದಬ್ಬಾಳಿಕೆ ಸಹಿಸುವುದಿಲ್ಲ. ನಮ್ಮ ದೇಶವನ್ನು ರಕ್ಷಿಸಿಕೊಳ್ಳಲು ಹೋರಾಟಕ್ಕೆ ಸಿದ್ಧ ಎಂದು ಪರೋಕ್ಷವಾಗಿ ಆದರೆ ಪ್ರಬಲ ಎನಿಸುವಂಥ ಸಂದೇಶವನ್ನು ಜಗತ್ತಿಗೆ ರವಾನಿಸಿದೆ.

ಚೀನಾ ಮತ್ತು ತೈವಾನ್ ನಡುವಣ ಸಂಘರ್ಷ ಸದ್ಯಕ್ಕೆ ಶಮನಗೊಳ್ಳುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಸಮರಾಭ್ಯಾಸದ ನೆಪದಲ್ಲಿ ತೈವಾನ್ ಕೊಲ್ಲಿಯಲ್ಲಿ ಚೀನಾ ಗಸ್ತು ಹೆಚ್ಚಿಸಿದ್ದು, ಇಡೀ ದ್ವೀಪಕ್ಕೆ ದಿಗ್ಬಂಧನ ಹಾಕುವ ತಾಲೀಮು ಮುಂದುವರಿಸಿರುವ ನಡುವೆಯೇ ಈ ಬೆಳವಣಿಗೆ ನಡೆದಿದೆ.

ಚೀನಾದ ಆಕ್ರಮಣದ ವಿರುದ್ಧ ರಕ್ಷಣೆ ದೃಷ್ಟಿಯಿಂದ ತೈವಾನ್ ಸಹ ತನ್ನ ಅಮೆರಿಕ ನೆರವಿನಿಂದ ಸೇನಾಪಡೆಯನ್ನು ವೇಗವಾಗಿ ಆಧುನೀಕರಿಸುತ್ತಿದ್ದು, ಸೈನಿಕರ ಸಂಖ್ಯೆ, ರಕ್ಷಣಾ ವೆಚ್ಚವನ್ನು ಹೆಚ್ಚಿಸಿಕೊಂಡಿದೆ. ವಾಯುಪಡೆಯ ಸಿಬ್ಬಂದಿಯು ಫೆ-16ವಿ ಫೈಟರ್ ಅನ್ನು ಅಮೆರಿಕ ನಿರ್ಮಿತ ಕ್ಷಿಪಣಿ ನಿರೋಧಕ ಯುದ್ಧನೌಕೆಯೊಂದಿಗೆ ಪೂರ್ವ ಹುವಾಲಿಯನ್ ಪ್ರದೇಶದಲ್ಲಿ ಯುದ್ಧ ಸನ್ನದ್ಧತೆ ವ್ಯಾಯಾಮ ನಡೆಸಿದೆ. ಕ್ಷಿಪಣಿಗಳೊಂದಿಗೆ ಶಸ್ತ್ರಸಜ್ಜಿತ ಆರು ಫೆ-16ವಿ ಫೈಟರ್ ಜೆಟ್‌ಗಳು ರಾತ್ರಿ ವಿಚಕ್ಷಣ ಮತ್ತು ತರಬೇತಿ ಕಾರ್ಯಾಚರಣೆ ನಡೆಸಿದೆ ಎಂದು ತೈವಾನ್ ವಾಯುಪಡೆ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!