ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರಿನ ಆಟೋ ರಿಕ್ಷಾ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳೂರಿಗೆ ಭೇಟಿ ನೀಡಿದ ದಿನವೇ ಸ್ಫೋಟ ಸಂಭವಿಸಿರುವುದು ಕಳವಳಕಾರಿ ವಿಷಯವಾಗಿದೆ.
ಸಿಎಂ ಬೊಮ್ಮಾಯಿ ಅವರು ಬೆಳಗ್ಗೆ 11 ಗಂಟೆಗೆ ಮಂಗಳೂರಿಗೆ ಬಂದಿದ್ದು, ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸ್ಪೋಟ ಸಂಭವಿಸಿದ್ದು 5:15 ನಿಮಿಷಕ್ಕೆ, ಸಿಎಂ ಬೊಮ್ಮಾಯಿ ಮಂಗಳೂರಿನಿಂದ ಹೊರಟಿದ್ದು ಮಧ್ಯಾಹ್ನ 3:30ಕ್ಕೆ. ಸ್ಫೋಟ ಸಂಭವಿಸಿದ ಸ್ಥಳಕ್ಕೂ, ಸಿಎಂ ಬೊಮ್ಮಾಯಿ ಇದ್ದ ಸ್ಥಳಕ್ಕೂ ಇದ್ದ ವ್ಯತ್ಯಾಸ ಬರೀ 10 ಕಿ.ಮೀ. ಮಾತ್ರ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿ ಶಾರೀಕ್ ಕುಕ್ಕರ್ ಹೊತ್ತೊಯ್ಯುವಾಗ ಮೂರು ಶರ್ಟ್ ಧರಿಸಿದ್ದ ಎನ್ನಲಾಗಿದೆ. ಬೇರೆ ಬೇರೆ ವಾಹನ ಬದಲಾಯಿಸಿದಾಗೆಲ್ಲಾ ಆತ ಶರ್ಟ್ ಬದಲಾಯಿಸಿ ಪೊಲೀಸರ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದ ಎನ್ನಲಾಗಿದೆ.