Sunday, December 10, 2023

Latest Posts

ಜಮ್ಮುವಿನ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕ್‌ ಒಳನುಸುಳುಕೋರನ ಗುಂಡಿಕ್ಕಿ ಹತ್ಯೆಗೈದ ಸೇನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಜಮ್ಮುವಿನ ಆರ್‌ಎಸ್‌ ಪುರ ಸೆಕ್ಟರ್‌ನ ಅಂತಾರಾಷ್ಟ್ರೀಯ ಗಡಿಯಲ್ಲಿ, ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಒಬ್ಬ ಪಾಕಿಸ್ತಾನಿ ಒಳನುಸುಳುಕೋರನನ್ನು ಸದೆಬಡಿಯಲಾಗಿದೆ ಎಂದು ಹಿರಿಯ ಬಿಎಸ್‌ಎಫ್ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಇಂದು ಮುಂಜಾನೆ 2.30 ಕ್ಕೆ ಒಳನುಗ್ಗಿದ ವ್ಯಕ್ತಿಗೆ ಎಚ್ಚರ ಕೊಟ್ಟರೂ ಕ್ಯಾರೆ ಎನ್ನದೆ ಒಳಬರಲು ಪ್ರಯತ್ನಿಸುತ್ತಿದ್ದ ಎನ್ನಲಾಗಿದೆ.

ಸೂಚನೆಗೂ ಬಗ್ಗದೆ ಒಳನುಸುಳುತ್ತಿದ್ದವನನ್ನು ಸೇನೆ ಗುಂಡಿಕ್ಕಿದೆ. ಈ ಘಟನೆಗೆ ಪಾಕಿಸ್ತಾನದ ಕಡೆಯಿಂದ ಯಾವುದೇ ಪ್ರತೀಕಾರ ನಡೆದಿಲ್ಲ ಎಂದು ಹಿರಿಯ ಬಿಎಸ್‌ಎಫ್ ಅಧಿಕಾರಿ ತಿಳಿಸಿದ್ದಾರೆ. ಈ ಪ್ರದೇಶವನ್ನು ಸುತ್ತುವರಿದಿದ್ದು, ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ಇದರ ಜೊತೆಗೆ ಮಂಗಳವಾರ ಬೆಳಿಗ್ಗೆ ಜಮ್ಮು ಮತ್ತು ಕಾಶ್ಮೀರದ ರಾಮ್‌ಗಢ ಸೆಕ್ಟರ್‌ನಲ್ಲಿ ಅಂತರರಾಷ್ಟ್ರೀಯ ಗಡಿ ದಾಟಿ ಫೆನ್ಸಿಂಗ್‌ ಸಮೀಪಿಸುತ್ತಿರುವಾಗ ಪಾಕಿಸ್ತಾನಿ ಒಳನುಗ್ಗುತ್ತಿದ್ದವರನ್ನು ಸಹ ಬಿಎಸ್‌ಎಫ್ ಪಡೆಗಳು ಬಂಧಿಸಿವೆ. ಗೇಟ್ ತೆರೆದ ನಂತರ ಆತನನ್ನು  ಭಾರತದ ಬೇಲಿಯ ಬದಿಯೊಳಗೆ ಕರೆತರಲಾಯಿತು. ಆತನಿಂದ ಯಾವುದೇ ದೋಷಾರೋಪಣೆ ಕಂಡುಬಂದಿಲ್ಲ. ಪ್ರದೇಶವನ್ನು ಶೋಧಿಸಲಾಗುವುದು ಎಂದು ಬಿಎಸ್ಎಫ್ ಹೇಳಿದೆ.

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!