ಹೆಣ್ಣು ಮಕ್ಕಳ ಅಂಗಾಂಗಗಳನ್ನು ಕಿತ್ತು ತಿನ್ನುತ್ತವೆ: ಸ್ಫೋಟಕ ಭವಿಷ್ಯ ನುಡಿದ ಕೋಡಿಮಠ ಶ್ರೀ

ಹೊಸದಿಗಂತ ಡಿಜಿಟಲ್ ಡೆಸ್ಕ್

ದೇಶದಲ್ಲಿ ಸುಂದರವಾದ ಹೆಣ್ಣುಮಕ್ಕಳು- ಅಂಗಾಂಗಗಳು ಕಿತ್ತು ತಿಂತಾರೆ ಎಂದು ಹಾರನಹಳ್ಳಿ ಕೋಡಿಮಠ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಮತ್ತೊಂದು ಅಚ್ಚರಿಯ ಭವಿಷ್ಯ ನುಡಿದಿದ್ದಾರೆ.
ಇಂದು ಹಾಸನದ ಕೋಡಿಮಠದಲ್ಲಿ ಮಾತನಾಡಿದ ಅವರು, ಮಲೆನಾಡು ಹೋಗಿ ಬಯಲಾಗುತ್ತದೆ, ಬಯಲು ಹೋಗಿ ಮಲೆನಾಡಾಗುತ್ತದೆ. ಭಾರತದಲ್ಲಿ ಈ ಸಂವತ್ಸರದಲ್ಲಿ ಬಹುದೊಡ್ಡ ಅವಘಡ ಸಂಭವಿಸುತ್ತದೆ. ಈ ವರ್ಷ ಮಳೆ, ಕೆಂಡಾಮಂಡಲ, ಮುಂಗಾರು ಚೆನ್ನಾಗಿ ಆಗುತ್ತದೆ.
ಹಿಂಗಾರು ಸ್ವಲ್ಪ ಕಡಿಮೆ ಆಗಲಿದೆ. ರಾಷ್ಟ್ರದಲ್ಲಿ ಅಶಾಂತಿ, ದೊಂಬಿ, ಮತೀಯ ಗಲಭೆ, ಸಾವು – ನೋವುಗಳು ಮತ್ತು ಕೊಲೆಗಳು ಹೆಚ್ಚಾಗಲಿವೆ. ಅದರಲ್ಲೂ ವಿಶೇಷವಾಗಿ ವಿದ್ಯುತ್ ಅಪಾಯಗಳು ಹೆಚ್ಚು ಸಂಭವಿಸಲಿವೆ ಎಂದು ತಿಳಿಸಿದರು.
ಬೆಂಕಿ, ಗಾಳಿ ಹಾಗೂ ಗುಡುಗು ಅಪಾಯ ಹೆಚ್ಚಾಗುತ್ತದೆ . ಜಗತ್ತಿನ ಸಾಮ್ರಾಟರೆಲ್ಲರೂ ತಲ್ಲಣಗೊಳ್ಳುತ್ತಾರೆ. ಇಲ್ಲಿತನಕ ಕಂಡು ಕೇಳರಿಯದ ಬಹುದೊಡ್ಡ ಆಘಾತ ಭಾರತದಲ್ಲಿ ಆಗಲಿದೆ. ಸುಂದರವಾದ ಹೆಣ್ಣುಮಕ್ಕಳ ಅಂಗಾಗಳನ್ನು ಕಿತ್ತು ತಿನ್ನುತ್ತಾರೆ. ರಾಜಕೀಯ ವಿಪ್ಲವಗಳು, ರಾಜಕೀಯ ಗುಂಪುಗಳಾಗ್ತಾವೆ ಎನ್ನುವ ಮೂಲಕ ಭಯಾನಕ ಭವಿಷ್ಯವಾಣಿಯನ್ನು ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ನುಡಿದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!