ಮತದಾನ ದಿನ ನಮ್ಮ ಮೆಟ್ರೋ ರೈಲು ಸಂಚಾರ ಅವಧಿ ಮಧ್ಯರಾತ್ರಿಯವರೆಗೆ ವಿಸ್ತರಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯ ವಿಧಾನಸಭೆ ಚುನಾವಣೆಗೆ ಮೇ.10 ರಂದು ನಡೆಯುವ ಮತದಾನಕ್ಕೆ ಬಿಎಂಆರ್​ಸಿಎಲ್(BMRCL) ಮೆಟ್ರೋ ರೈಲು ಸಂಚಾರದ ಅವಧಿಯನ್ನ ವಿಸ್ತರಣೆ ಮಾಡಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಮೆಟ್ರೋ ರೈಲು ಸೇವೆಗಳನ್ನ ಮಧ್ಯರಾತ್ರಿಯವರೆಗೆ ವಿಸ್ತರಿಸಲಾಗಿದೆ.

ಮೆಟ್ರೋ ರೈಲು ಸಂಚಾರದ ವೇಳಾಪಟ್ಟಿ ಹೀಗಿದೆ:

ಟರ್ಮಿನಲ್ ನಿಲ್ದಾಣಗಳಾದ ಬೈಯಪ್ಪನಹಳ್ಳಿ, ಕೆಂಗೇರಿ, ನಾಗಸಂದ್ರ, ರೇಷ್ಮೆ, ಸಂಸ್ಥೆ, ಕೃಷ್ಣರಾಜಪುರ ಮತ್ತು ವೈಟ್‌ ಫೀಲ್ಡ್ (ಕಾಡುಗೋಡಿ)ಯಿಂದ ಕೊನೆಯ ರೈಲು ಮೇ.11 ರ ರಾತ್ರಿ 12 ಗಂಟೆ 05 ನಿಮಿಷಕ್ಕೆ ಹೊರಡಲಿದೆ. ಇನ್ನು ನಾಡಪುಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್‌ನಿಂದ ಕೊನೆಯ ರೈಲು ಮೇ.11 ರ ರಾತ್ರಿ 12 ಗಂಟೆ 35 ನಿಮಿಷಕ್ಕೆ ಎಲ್ಲಾ ನಾಲ್ಕು ದಿಕ್ಕುಗಳ ಕಡೆಗೆ ಅಂದರೆ ಬೈಯಪ್ಪನಹಳ್ಳಿ, ಕೆಂಗೇರಿ, ನಾಗಸಂದ್ರ, ರೇಷ್ಮೆ, ಸಂಸ್ಥೆಯಿಂದ ಹೊರಡಲಿದೆ. ಈ ಸೇವೆಯನ್ನು ಪೂರ್ಣ ಪ್ರಮಾಣದಲ್ಲಿ ಉಪಯೋಗಿಸಿಕೊಳ್ಳಬೇಕೆಂದು ಬಿಎಂಆರ್‌ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!