ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂದಿನ ದಿನಗಳಲ್ಲಿ ಉತ್ತರ ಭಾರತದಲ್ಲಿ ದಟ್ಟ ಮಂಜು ಮತ್ತು ಚಳಿ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಕಾರಣದಿಂದಾಗಿ ಸುತ್ತಲ ಪ್ರದೇಶ ತುಂಬಾ ತಂಪಾಗಿರಲಿದ್ದು ಮುನ್ನೆಚ್ಚರಿಕೆ ಕ್ರಮವನ್ನು ವಹಿಸುವಂತೆ ಸೂಚನೆ ನೀಡಿದೆ.
ಮುಂದಿನ 5 ದಿನಗಳಲ್ಲಿ ಪಂಜಾಬ್, ಹರಿಯಾಣ, ಚಂಡೀಗಢ, ಉತ್ತರ ಪ್ರದೇಶ ಮತ್ತು ಬಿಹಾರ, ಹಿಮಾಚಲ ಪ್ರದೇಶ, ಪಂಜಾಬ್‌ನ ಬಯಲು ಪ್ರದೇಶಗಳಲ್ಲಿ ಮುಂದಿನ 4-5 ದಿನಗಳಲ್ಲಿ ದಟ್ಟವಾದ ಮಂಜು ಕವಿದಿರುತ್ತದೆ. ಈಗಾಗಲೇ ದೆಹಲಿಯಲ್ಲಿ ಮುಂದಿನ ಎರಡು ದಿನಗಳವರೆಗೆ ಕೋಲ್ಡ್ ವೇವ್ ಅಲರ್ಟ್ ನೀಡಲಾಗಿದ್ದು, ಇದನ್ನು ಈಗ ವಿಸ್ತರಿಸಲಾಗಿದೆ ಎಂದು ತಿಳಿಸಿದೆ.
ಕಾಶ್ಮೀರದಲ್ಲಿ ಹಿಮಪಾತವಾಗಿದ್ದು ಬಿಳಿ ಹಾಳೆಯಂತೆ ಹಲವು ಪ್ರದೇಶಗಳು ಕಾಣ ಸಿಗುತ್ತಿವೆ ದಾಲ್ ಸರೋವರ ಹೆಪ್ಪುಗಟ್ಟಿದೆ ಮತ್ತು ಕೆಲವು ಪ್ರದೇಶಗಳಲ್ಲಿ ಪಾದರಸವು ಮೈನಸ್ ತಲುಪಿದೆ. ಆದರೆ ಲಡಾಖ್‌ನಲ್ಲಿ ಇಂದು ಕನಿಷ್ಠ ತಾಪಮಾನ -25.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಸಿಯಾಚಿನ್‌ನಲ್ಲಿ ಪಾದರಸ -30 ಡಿಗ್ರಿಗಿಂತ ಕಡಿಮೆಯಿದೆ. ಲೇಹ್ ಮತ್ತು ಕಾರ್ಗಿಲ್‌ನಲ್ಲಿ -15 ಡಿಗ್ರಿಗಿಂತ ಕಡಿಮೆ ತಾಪಮಾನವಿದೆ. ಚಿಲ್ಲೈ ಕಾಲನ್‌ನಿಂದಾಗಿ, ಕಾಶ್ಮೀರದಲ್ಲಿ ತೀವ್ರ ಚಳಿ ಇದೆ ಎಂದು ಇಲಾಖೆ ತಿಳಿಸಿದೆ.