ಹೊಸದಾಗಿ ಕರ್ನಾಟಕಕ್ಕೆ ಆಗಮಿಸಿರುವ ವೈರಸ್ ಬರೀ ಮಕ್ಕಳಿಗೆ ಮಾತ್ರ ಹೆಚ್ಚಾಗಿ ಬಾಧಿಸಿದ್ದು, ಪೋಷಕರಲ್ಲಿ ಆತಂಕ ಮೂಡಿಸಿದೆ. ಚಳಿ ಕೂಡ ವಿಪರೀತವಾಗಿದ್ದು, ಮಕ್ಕಳ ಆರೋಗ್ಯವನ್ನು ಹೇಗೆ ಕಾಪಾಡೋದು ನೋಡಿ..
ಮಕ್ಕಳನ್ನು ಶಾಲೆಗೆ ಅಥವಾ ಹೊರಗೆ ಕಳುಹಿಸುವಾಗ ಸರಿಯಾದ ಬೆಚ್ಚಗಿನ ಬಟ್ಟೆ ಹಾಕಿ.
ಆದಷ್ಟು ಮಕ್ಕಳನ್ನು ಇಂಡೋರ್‌ನಲ್ಲಿಯೇ ಇಟ್ಟುಕೊಳ್ಳಿ, ಹೊರಗಡೆ ಆಟ ಬೇಡ ಎಂದು ಹೇಳಿ.
ಮಕ್ಕಳಿಗೆ ಕುದಿಸಿದ ಬಿಸಿ ನೀರು, ಕಷಾಯ ರೂಢಿ ಮಾಡಿ.
ಊಟ ಮಾಡುವ ಮುನ್ನ ಕೈತೊಳೆಯುವುದು, ಆಗಾಗ ಕೈ ತೊಳೆಯುವ ಅಭ್ಯಾಸ ಮಾಡಿ.
ಹೆಚ್ಚೆಚ್ಚು ವಿಟಮಿನ್ ಸಿ ಇರುವ ಆಹಾರ ಪದಾರ್ಥಗಳನ್ನು ತಿನ್ನಿಸಿ
ಬಿಸಿಲು ಬಂದಾಗ ಸ್ವಲ್ಪ ಹೊತ್ತು ಮನೆಯ ಮುಂದೆಯೇ ಆಟ ಆಡಲು ಬಿಡಿ.
ಜಂಕ್ ಫುಡ್ ನೀಡದೇ ಮಕ್ಕಳಿಗೆ ಮನೆಯಲ್ಲಿ ಮಾಡಿದ ಆರೋಗ್ಯಕರ ಆಹಾರ ನೀಡಿ.
ಅನಾವಶ್ಯಕವಾಗಿ ಆಸ್ಪತ್ರೆಗೆ ಹೋಗಬೇಡಿ. ಹೋಗಬೇಕಿದ್ದಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗಬೇಡಿ,