ಭಾರತದಲ್ಲಿ ಬಡತನ ಪ್ರಮಾಣ ಇಳಿಮುಖ, ರೈತರ ಆದಾಯದಲ್ಲಿ ಶೇ.10ರಷ್ಟು ಹೆಚ್ಚಳ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತದಲ್ಲಿ ಬಡತನದ ಪ್ರಮಾಣ ಇಳಿಮುಖವಾಗಿದೆ ಎಂದು ವಿಶ್ವಬ್ಯಾಂಕ್‌ ಹೇಳಿದೆ. ವಿಶ್ವಬ್ಯಾಂಕ್ ವರದಿಯ ಪ್ರಕಾರ, ಭಾರತದಲ್ಲಿ ಬಡತನ 2011 ಕ್ಕೆ ಹೋಲಿಸಿದರೆ 2019 ರಲ್ಲಿ ತೀವ್ರವಾಗಿ ಕುಸಿದಿದೆ. ಒಂಭತ್ತು ವರ್ಷಗಳಲ್ಲಿ ಬಡತನವು ಶೇಕಡಾ 12.3 ರಷ್ಟು ಕಡಿಮೆಯಾಗಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ. 2011 ರಲ್ಲಿ ಶೇಕಡಾ 22.5 ರಷ್ಟಿದ್ದ ಬಡತನ ರೇಖೆ 2019 ರಲ್ಲಿ ಶೇಕಡಾ 10.2 ಕ್ಕೆ ಇಳಿದಿದೆ.

ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಬಡತನ ಗಣನೀಯವಾಗಿ ಕಡಿಮೆಯಾಗಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ. ವಿಶ್ವಬ್ಯಾಂಕ್ ವರದಿಯ ಪ್ರಕಾರ ನಗರ ಪ್ರದೇಶಗಳಲ್ಲಿ ಬಡತನವು ಶೇಕಡಾ 14.2 ರಿಂದ ಶೇಕಡಾ 6.3 ಕ್ಕೆ ಇಳಿದಿದೆ. ರೈತರ ವಾರ್ಷಿಕ ಆದಾಯ ಶೇ.2ರಷ್ಟು ಹೆಚ್ಚಿದ್ದರೆ, ಸಣ್ಣ ರೈತರ ಆದಾಯ ಶೇ.10ರಷ್ಟು ಹೆಚ್ಚಿದೆ. ಒಟ್ಟಾರೆ ಭಾರತದಲ್ಲಿ ಬಡತನವು ದಶಕದಲ್ಲಿ ಕಡಿಮೆಯಾಗಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ.

ಭಾರತ ತೀವ್ರ ಬಡತನವನ್ನು ನಿರ್ಮೂಲನೆ ಮಾಡಿದೆ ಎಂದು IMF ವರ್ಕಿಂಗ್ ಪೇಪರ್ ಬಹಿರಂಗಪಡಿಸಿದೆ. ಸರ್ಕಾರವು ಉಚಿತ ಆಹಾರ ಸರಬರಾಜು ಮಾಡಿದ್ದರಿಂದ, ಅಸಮಾನತೆಯನ್ನು 40 ವರ್ಷಗಳಲ್ಲಿ ಕನಿಷ್ಠ ಮಟ್ಟಕ್ಕೆ ಇಳಿಸಲಾಗಿದೆ ಎಂದು ವರದಿಯಲ್ಲಿ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!