ವಿಪರೀತ ತಾಪಮಾನ: ಇಲ್ಲಿ ಮತಗಟ್ಟೆಗಳಲ್ಲಿ ಇರಲಿದೆ ಏರ್‌ ಕೂಲರ್‌, ಫ್ಯಾನ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭೆ ಚುನಾವಣೆಗೆ ದೇಶವೇ ಸಜ್ಜಾಗುತ್ತಿದ್ದು, ಇದರ ನಡುವೆ ಬಿಸಿಲ ಪ್ರಮಾಣ ದಿನೇ ದಿನೇ ಹೆಚ್ಚುತ್ತಲ್ಲೇ ಇದೆ .
ಹೀಗಾಗಿ ಪಂಜಾಬ್‌ನಲ್ಲಿ ವಿಪರೀತ ತಾಪಮಾನ ಇರುವ ಮುನ್ಸೂಚನೆ ಇರುವುದರಿಂದ ಮತಗಟ್ಟೆಗಳಲ್ಲಿ ಏರ್‌ ಕೂಲರ್‌, ಫ್ಯಾನ್‌ ಅಳವಡಿಸಲಾಗುತ್ತದೆ.ಅಲ್ಲದೇ ಮತದಾರರಿಗೆ ನೀರು, ತಂಪು ಪಾನೀಯ ಹಾಗೂ ಇತರ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ.

ಈ ಕುರಿತು ಪಂಜಾಬ್‌ನ ಮುಖ್ಯ ಚುನಾವಣಾಧಿಕಾರಿ ಸಿಬಿನ್‌ ಸಿ. ಅವರು ತಿಳಿಸಿದ್ದು, ಈ ವರ್ಷ ಪಂಜಾಬ್‌ನಲ್ಲಿ ಅಧಿಕ ತಾಪಮಾನ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ, ಮತದಾರರಿಗೆ ಕುಡಿಯುವ ನೀರು, ತಂಪು ಪಾನೀಯ ನೀಡಬೇಕು ಎಂದು ಚುನಾವಣಾ ಆಯೋಗವು ಕಳೆದ ತಿಂಗಳು ನಿರ್ದೇಶನ ನೀಡಿತ್ತು. ಇದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆಯೂ ಆದೇಶಿಸಿತ್ತು.

ಜೂನ್‌ 1ರಂದು ಪಂಜಾಬ್‌ನಲ್ಲಿ ಲೋಕಸಭಾ ಚುನಾವಣೆಯ ಮತದಾನ ನಡೆಯಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!