ಮೆಕ್ಸಿಕೋಗೆ ʻಲಿಡಿಯಾʼ ಚಂಡಮಾರುತದ ಗಂಡಾಂತರ: ಭಾರೀ ಅಲರ್ಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅತ್ಯಂತ ಅಪಾಯಕಾರಿ ಚಂಡಮಾರುತ`ಲಿಡಿಯಾ’ ಮೆಕ್ಸಿಕೋ ದೇಶವನ್ನು ನಡುಗಿಸಿದೆ. ಮಂಗಳವಾರ, ಮೆಕ್ಸಿಕೋದ ಪೆಸಿಫಿಕ್ ಕರಾವಳಿಯನ್ನು ಲಿಡಿಯಾ ಅಪ್ಪಳಿಸಿದ ಬಳಿಕ ಭಾರೀ ಅಲರ್ಟ್‌ ಜಾರಿಯಾಗಿದೆ.

ಚಂಡಮಾರುತದಿಂದಾಗಿ ಕರಾವಳಿಯ ಪೋರ್ಟೊ ವಲ್ಲರ್ಟಾದಲ್ಲಿ ಭೂಕುಸಿತ ಉಂಟಾಗಿದ್ದು, 4ನೇ ವರ್ಗದ ಅತ್ಯಂತ ಅಪಾಯಕಾರಿ ಚಂಡಮಾರುತವಾಗಿ ಮಾರ್ಪಟ್ಟಿದೆ ಎಂದು ಹವಾಮಾನ ತಜ್ಞರು ಎಚ್ಚರಿಸಿದರು.

ಲಿಡಿಯಾ ಪೋರ್ಟೊ ವಲ್ಲರ್ಟಾ ಬೀಚ್ ರೆಸಾರ್ಟ್ ಬಳಿ ಗಂಟೆಗೆ ಗರಿಷ್ಠ 220 ಕಿಲೋಮೀಟರ್ ವೇಗದ ಗಾಳಿ ಬೀಸಿತ್ತು. ಬಿರುಸಾದ ಗಾಳಿ, ಮಳೆಯು ಮೆಕ್ಸಿಕೋದಲ್ಲಿ ಅವಾಂತರ ಸೃಷ್ಟಿಸಿದೆ. ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ತೀರ ಪ್ರದೇಶದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!