October 6, 2026
Tuesday, October 6, 2026
spot_img

ಫೇಸ್‌ಬುಕ್‌ನಿಂದ ಪ್ರಧಾನಿ ಮೋದಿಯ ವಿಡಿಯೋಗೆ ನಿರ್ಬಂಧ: ಕೇಂದ್ರದಿಂದ ಮೆಟಾಗೆ ಸಮನ್ಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರಧಾನಿ ಮೋದಿ ಅವರ ಅಧಿಕೃತ ಫೇಸ್‌ಬುಕ್‌ ಖಾತೆಯಲ್ಲಿ ಪೋಸ್ಟ್‌ ಮಾಡಲಾಗಿದ್ದ ವಿಡಿಯೋವೊಂದನ್ನ ಸಾರ್ವಜನಿಕ ವೀಕ್ಷಣೆಯಿಂದ ತೆಗೆದುಹಾಕಿದ್ದ ಸಂಬಂಧ ಇದೀಗ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಮೆಟಾ ಸಂಸ್ಥೆಗೆ ಸಮನ್ಸ್ ಜಾರಿ ಮಾಡಿದೆ.

ಪ್ರಧಾನಿಯವರ ವೀಡಿಯೊವನ್ನು ಫೇಸ್‌ಬುಕ್‌ನಿಂದ ತಾತ್ಕಾಲಿಕವಾಗಿ ನಿರ್ಬಂಧಿಸಲು ಕಾರಣವೇನು ಎಂದು ಕೇಂದ್ರ ಸರ್ಕಾರ ಮೆಟಾ ಸಂಸ್ಥೆಗೆ ಸ್ಪಷ್ಟನೆ ಕೇಳಿದೆ. ಅಲ್ಲದೇ ಇದರ ಬಗ್ಗೆ ಸ್ಪಷ್ಟನೆ ನೀಡಲು ಮೆಟಾದ ಜಾಗತಿಕ ಸಾರ್ವಜನಿಕ ನೀತಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದೆ.

ಈಗಾಗಲೇ ಮೆಟಾ ಪ್ರಧಾನಿ ಮೋದಿ ಅವರಿಗೆ ಕ್ಷಮೆ ಕೇಳಿದೆ. ಈ ಸಮಸ್ಯೆಯು ತಾಂತ್ರಿಕ ದೋಷದ ಪರಿಣಾಮದಿಂದ ಆಗಿದೆ, ಉದ್ದೇಶ ಪೂರ್ವಕವಾಗಿ ತೆಗೆದುಕೊಂಡ ಕ್ರಮವಲ್ಲ ಎಂದು ಮೆಟಾ ಸಂಸ್ಥೆ ಸ್ಪಷ್ಟನೆ ನೀಡಿದೆ. ತಪ್ಪಾಗಿ ವಿಡಿಯೋ ಡಿಲೀಟ್‌ ಆಗಿದೆ, ಪುನಃ ವಿಡಿಯೋವನ್ನ ಮರುಸ್ಥಾಪಿಸಲಾಗಿದೆ. ತಪ್ಪಿಗೆ ನಾವು ಕ್ಷಮೆಯಾಚಿಸುತ್ತೇವೆ. ಇದು ಯಾವುದೇ ಉದ್ದೇಶಿತ ಕಾರ್ಯವಲ್ಲ ಎಂದು ಮೆಟಾ ವಕ್ತಾರರು ತಿಳಿಸಿದ್ದಾರೆ.

Must Read