ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವದ ಬಹುತೇಕ ರಾಷ್ಟ್ರಗಳು ರಷ್ಯಾದ ಉಕ್ರೇನ್ ಮೇಲಿನ ದಾಳಿಯನ್ನು ವಿರೋಧಿಸುತ್ತಿವೆ. ಈಗ ತಾಂತ್ರಿಕ ದೈತ್ಯ ಸಂಸ್ಥೆಗಳಾದ ಫೇಸ್ ಬುಕ್, ಗೂಗಲ್ ತಮ್ಮದೇ ರೀತಿಯಲ್ಲಿ ರಷ್ಯಾ ವಿರುದ್ಧ ನಿರ್ಬಂಧ ಹೇರಿವೆ.
ರಷ್ಯಾದ ಸರ್ಕಾರಿ ಮಾಧ್ಯಮಗಳು, ಗೂಗಲ್ ಅಥವಾ ಅದರ ಇತರ ಸಹ ಸಂಸ್ಥೆಗಳ ಮೂಲಕ ಹಣ ಪಡೆಯುವುದನ್ನು ನಿಷೇಧಿಸಿದೆ.
ರಷ್ಯಾದ ಸರ್ಕಾರಿ ಮಾಧ್ಯಮಗಳು ಗೂಗಲ್, ಫೇಸ್ ಬುಕ್, ಯೂಟ್ಯೂಬ್ ಬಳಸಿ ಜಾಹಿರಾತುಗಳ ಮೂಲಕ ಲಾಭ ಪಡೆಯಲು ಆಗುವುದಿಲ್ಲ ಎಂದು ಫೇಸ್ ಬುಕ್ ನ ಭದ್ರತಾ ನೀತಿಯ ಮುಖ್ಯಸ್ಥ ನಥಾನಿಯಲ್ ಗ್ಲೀಚರ್ ತಿಳಿಸಿದ್ದಾರೆ.
ಈ ಮೂಲಕ ಗೂಗಲ್, ಫೇಸ್ ನಂತರ ಅಮೆರಿಕದ ತಾಂತ್ರಿಕ ಸಂಸ್ಥೆಗಳು ಕೂಡ ರಷ್ಯಾ ಮಾಧ್ಯಮಗಳು ಆರ್ಥಿಕ ಲಾಭ ಪಡೆಯುವುದಕ್ಕೆ ನಿರ್ಬಂಧಿಸಿವೆ. ಈ ನಿಯಮ ಈ ವಾರಾಂತ್ಯದ ವರೆಗೆ ಅನ್ವಯಿಸಲಿದೆ.
ನಾವಯ ಉಕ್ರೇನ್ ನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ. ಅಲ್ಲಿನ ಜನರ ರಕ್ಷಣೆಗಾಗಿ ನಾವು ಈ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದಾರೆ.