ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯ ಪ್ರದೇಶದಲ್ಲಿ ಬಿಜೆಪಿ ವಿರುದ್ಧ ಪೋಸ್ಟರ್ ಅಭಿಯಾನಕ್ಕೆ ಹೊರಟ ಕಾಂಗ್ರೆಸ್ ಗೆ ಮುಖಭಂಗವಾಗಿದೆ.
ಕಾಂಗ್ರೆಸ್ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧದ ಆನ್ಲೈನ್ ಪಾವತಿ ಪೋಸ್ಟರ್ ಹಾಕಿದ್ದು,ಇದೀಗ ಪೋಸ್ಟರ್ ಗಳಿಂದ ತನ್ನ ಲೋಗೋ ತೆಗೆದುಹಾಕುವಂತೆ ಡಿಜಿಟಲ್ ವ್ಯಾಲೆಟ್-ಆನ್ಲೈನ್ ಪಾವತಿ ಕಂಪನಿ ಫೋನ್ಪೇ ( PhonePe) ಮಧ್ಯ ಪ್ರದೇಶ ಕಾಂಗ್ರೆಸ್ ಗೆ ಸೂಚಿಸಿದೆ.
PhonePe ಲೋಗೋ ನಮ್ಮ ಕಂಪನಿಯ ನೋಂದಾಯಿತ ಟ್ರೇಡ್ಮಾರ್ಕ್ ಆಗಿದೆ ಮತ್ತು PhonePeನ ಬೌದ್ಧಿಕ ಆಸ್ತಿ ಹಕ್ಕುಗಳ ಯಾವುದೇ ಅನಧಿಕೃತ ಬಳಕೆಯು ಕಾನೂನು ಕ್ರಮಕ್ಕೆ ದಾರಿ ಮಾಡಿಕೊಡುತ್ತದೆ. ನಮ್ಮ ಬ್ರ್ಯಾಂಡ್ ಲೋಗೋ ಮತ್ತು ಬಣ್ಣವನ್ನು ಒಳಗೊಂಡಿರುವ ಪೋಸ್ಟರ್ಗಳು ಮತ್ತು ಬ್ಯಾನರ್ಗಳನ್ನು ತೆಗೆದುಹಾಕುವಂತೆ ನಾವು ಮಧ್ಯ ಪ್ರದೇಶ ಕಾಂಗ್ರೆಸ್ ಗೆ ವಿನಂತಿಸುತ್ತೇವೆ. ನಾವು ಯಾವುದೇ ರಾಜಕೀಯ ಪ್ರಚಾರ ಅಥವಾ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ ಎಂದು ಟ್ವೀಟ್ ಮಾಡಿದೆ.