ಆಹಾರವನ್ನು ಅಗಿಯುವ ಪ್ರಕ್ರಿಯೆಯಿಂದಲೇ ನಮ್ಮ ಜೀರ್ಣಶಕ್ತಿಯು ಆರಂಭವಾಗುತ್ತದೆ. ಆಹಾರವನ್ನು ಚೆನ್ನಾಗಿ ಅಗಿಯುವುದರಿಂದ ತಿನ್ನುವ ಪ್ರಕ್ರಿಯೆ ನಿಧಾನವಾಗೋದು ಮಾತ್ರವಲ್ಲದೇ ಕಡಿಮೆ ಆಹಾರವನ್ನು ಸೇವನೆ ಮಾಡಲು ಸಾಧ್ಯವಾಗುತ್ತದೆ.
ವೇಗವಾಗಿ ತಿಂದಷ್ಟೂ ಹೆಚ್ಚು ಆಹಾರ ದೇಹವನ್ನು ಸೇರುತ್ತದೆ. ನಿಧಾನವಾಗಿ ಆಹಾರವನ್ನು ಜಗಿಯುವುದರಿಂದ ಕಡಿಮೆ ಆಹಾರ ಸೇವಿಸುತ್ತೀರಿ.
ವರದಿಯೊಂದರ ಪ್ರಕಾರ, ಆಹಾರವನ್ನು ಹೆಚ್ಚಾಗಿ ಅಗಿದು ತಿನ್ನುವವರು ಊಟವಾದ ಬಳಿಕ ಸಿಹಿಯನ್ನು ಸೇವನೆ ಮಾಡಲು ಬಯಸುವುದಿಲ್ಲ ಎಂದು ತಿಳಿದುಬಂದಿದೆ.