ಹಣ್ಣುಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಹಣ್ಣುಗಳು ಜೀವಸತ್ವಗಳು ಮತ್ತು ಪೋಷಕಾಂಶಗಳ ಪವರ್‌ಹೌಸ್ ಆಗಿವೆ.
ದೇಹದಲ್ಲಿನ ಪೋಷಕಾಂಶಗಳ ಕೊರತೆಯನ್ನು ನೀಗಿಸುತ್ತದೆ. ಅನೇಕರು ಹಣ್ಣುಗಳಿಗೆ ಉಪ್ಪು ಹಾಕಿಕೊಂಡು ತಿನ್ನುತ್ತಾರೆ. ಆದರೆ ಆರೋಗ್ಯ ತಜ್ಞರ ಪ್ರಕಾರ ಹಣ್ಣುಗಳ ಮೇಲೆ ಉಪ್ಪು ಸಿಂಪಡಿಸಿಕೊಂಡು ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕವಾಗಿದೆ.
ದೇಹವು ಆಹಾರದಿಂದ ಅಗತ್ಯವಿರುವಷ್ಟು ಉಪ್ಪನ್ನು ಪಡೆಯುತ್ತದೆ. ಇದಕ್ಕಿಂತ ಹೆಚ್ಚಿನ ಉಪ್ಪಿನ ಪ್ರಮಾಣವು ಹೃದಯ ಮತ್ತು ರಕ್ತದೊತ್ತಡಕ್ಕೆ ಒಳ್ಳೆಯದಲ್ಲ.
ಹೆಚ್ಚು ಉಪ್ಪು ತಿಂದರೆ ದೇಹದಲ್ಲಿ ಸೋಡಿಯಂ ಪ್ರಮಾಣ ಹೆಚ್ಚುತ್ತದೆ. ಇದು ಊತಕ್ಕೆ ಕಾರಣವಾಗುತ್ತದೆ. ದೇಹದ ವಿಷಗಳು ಒಳಗೇ ಉಳಿಯುತ್ತವೆ