ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾವೆಲ್ಲರೂ ಅಡುಗೆ ವಿಷಯ ಅಂತ ಬಂದಾಗ ತುಂಬ ರುಚಿಕರವಾದ, ಸ್ವಾದಿಷ್ಟವಾದ ಆಹಾರ ತಿನ್ನಬೇಕು ಅಂತ ಅನ್ಕೋತೀವಿ ಅದ್ರಲ್ಲಿ ತಪ್ಪಿಲ್ಲ. ಆದರೆ ಇನ್ನು ಕೆಲವರು ಚಿತ್ರ ವಿಚಿತ್ರವಾಗಿ ಆಹಾರ ಕ್ರಮಗಳನ್ನ ಪಾಲಿಸೋದನ್ನ ನಾವು ಕೇಳಿರುತ್ತೇವೆ, ಇಲ್ಲ ನೋಡಿರುತ್ತೇವೆ. ಅದೇ ರೀತಿ ಇಲ್ಲೊಂದು ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ತೋರಿಸಿರುವ ಫುಡ್ ನ ನೀವೇನಾದ್ರು ನೋಡಿದ್ರೆ ಅಯೋ ಇಂಥವ್ರು ಇದ್ದಾರಾ ಅನ್ನೋ ಪ್ರಶ್ನೆ ಮೂಡುತ್ತೆ.
ಪಿಜ್ಜಾ ಅಂದ್ರೆ ಯಾರಿಗೆ ಇಷ್ಟ ಇಲ್ಲ? ಎಲ್ಲರಿಗೂ ಇಷ್ಟ. ಹಾಗೆ ಗುಲಾಬ್ ಜಾಮೂನ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಎಲ್ಲರಿಗೂ ಇಷ್ಟ. ಈಗ ಈ ಎರಡು ಫುಡ್ ನ ಒಟ್ಟಿಗೆ ಹಾಕಿ ತಯಾರಿಸಿದ್ರೆ ಹೇಗಿರುತ್ತೆ, ಸ್ವಲ್ಪ ಯೋಚನೆ ಮಾಡಿ.
ಯಾಕೆಂದರೆ ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಗುಲಾಬ್ ಜಾಮೂನು ಜೊತೆ ಪಿಜ್ಜಾ ತಯಾರಿಸುತ್ತಿರುವುದು ನೀವು ಕಾಣಬಹುದಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಅನೇಕ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೊಸ ಪಾಕವಿಧಾನದ ವೀಡಿಯೊವನ್ನು Instagram ಖಾತೆ @realfoodler ನಲ್ಲಿ ಈ ವಿಡಿಯೋ ಅಪ್ಲೋಡ್ ಆಗಿದೆ.
ಈ ರೀತಿಯ ಆಹಾರವನ್ನು ನೋಡಿದ ಜನರು ಯಾಕಾದ್ರೂ ಹಿಂಗೆಲ್ಲ ಮಾಡ್ತಾರೋ ಜನ ಅನ್ನೋ ಹಾಗೆ ಆಗಿದೆ. ಏನೇ ಹೇಳಿ ಯಾವ ಯಾವ ಅಡುಗೆ ಯಾವ ರೀತಿಯಲ್ಲಿ ಮಾಡಬೇಕು ಆ ರೀತಿಯಲ್ಲಿ ಮಾಡಿದರೆ ಚಂದ. ಅದಕ್ಕೆ ಹೇಳೋದು ಈ ಕಣ್ಣಲ್ಲಿ ಇನ್ನು ಏನೇನ್ ನೋಡ್ಬೇಕೋ? ಅಂತ..