FACT | ಯುಗಾದಿ ಹಬ್ಬದ ದಿನ ಎಣ್ಣೆ ಸ್ನಾನ ಮಾಡುವುದರ ಹಿಂದಿನ ಉದ್ದೇಶ ಏನು? ಉಪಯೋಗ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯುಗಾದಿ ಎಂದ ಕೂಡಲೇ ನಮ್ಮ ಕಣ್ಣ ಮುಂದೆ ತಳಿರು ತೋರಣ, ಸುಣ್ಣ -ಬಣ್ಣ ಕಂಡ ಗೋಡೆಗಳು, ಮನೆಮಂದಿಯ ಸಂಭ್ರಮ ಹೀಗೆ ಹಲವು ಚಿತ್ತಾರಗಳು ಕಣ್ಮುಂದೆ ಸುಳಿಯುತ್ತವೆ. ಇದರೊಂದಿಗೆ ಯುಗಾದಿ ವಿಶೇಷ ಎಣ್ಣೆ ಸ್ನಾನ ಕೂಡ ಒಂದಾಗಿದೆ.

ಆಚರಣೆಯ ಸಮಯದಲ್ಲಿ ಎಣ್ಣೆಯಲ್ಲಿ ಸ್ನಾನ ಮಾಡುವುದು ವಾಡಿಕೆ. ಸಾಂಪ್ರದಾಯಿಕ ಸ್ನಾನಕ್ಕೆ ಹೋಲಿಸಿದರೆ ಎಣ್ಣೆ ಸ್ನಾನವು ವಿಶೇಷ ಭಾವನೆಯನ್ನು ಹೊಂದಿರುತ್ತದೆ. ಮೈಕೈ ಗೆ ಎಣ್ಣೆಯನ್ನು ಬಳಸುವುದು ಮತ್ತು ಮಸಾಜ್ ಮಾಡುವುದು ನಿಮ್ಮ ದೇಹವನ್ನು ವಿಶ್ರಾಂತಿ ಮಾಡುತ್ತದೆ. ಬಹಳ ಸಮಯದ ನಂತರ ಮೊದಲ ಬಾರಿಗೆ ಬಿಸಿನೀರಿನ ಸ್ನಾನವು ನಿಮ್ಮ ದೇಹ ಮತ್ತು ಮನಸ್ಸನ್ನು ಉಲ್ಲಾಸಗೊಳಿಸುತ್ತದೆ.

ಹಬ್ಬದ ಪ್ರತಿ ಆಚರಣೆಗೂ ಮಹತ್ವವಿದೆ. ಅದೇ ರೀತಿ ಎಣ್ಣೆ ಸ್ನಾನಕ್ಕೆ ವೈಜ್ಞಾನಿಕ ಕಾರಣಗಳಿವೆ. ಅಭ್ಯಂಜನದಿಂದ ಚೈತನ್ಯ ಬರುತ್ತದೆ. ದೇಹ, ಕೂದಲು, ಕೈಕಾಲುಗಳಿಗೆ ಎಣ್ಣೆ ಹಚ್ಚುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ತ್ವಚೆಯೂ ಉತ್ತಮವಾಗಿರುತ್ತದೆ.

ಅದಕ್ಕಾಗಿಯೇ ಈ ಆಚರಣೆಯಲ್ಲಿ ಎಣ್ಣೆ ಸ್ನಾನ ಮಾಡಿ ಹೊಸ ಬಟ್ಟೆ ಧರಿಸುತ್ತಾರೆ. ಎಣ್ಣೆಯುಕ್ತ ದೇಹದ ಚರ್ಮ ಮೃದುವಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!