ಸೋಲೆ ಗೆಲುವಿನ ಮೆಟ್ಟಿಲು: ಬಿಜೆಪಿ ಯುವ ಮುಖಂಡ ಚಂದು ಪಾಟೀಲ್

ಹೊಸ ದಿಗಂತ ವರದಿ, ಕಲಬುರಗಿ:

ಸೋಲೆ ಗೆಲುವಿನ ಮೆಟ್ಟಿಲು ಆಗಿದ್ದು,ಈ ಮೆಟ್ಟಿಲುಗಳನ್ನು ಹತ್ತಿ ಮತ್ತೆ ಮುಂದೆ ಬರುತ್ತೇವೆ ಎಂದು ಉತ್ತರ ಮತಕ್ಷೇತ್ರದ ಅಭ್ಯರ್ಥಿಯಾಗಿದ್ದ ಬಿಜೆಪಿ ಯುವ ಮುಖಂಡ ಚಂದು ಪಾಟೀಲ್ ಹೇಳಿದ್ದಾರೆ.

ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕಲಬುರಗಿ ಉತ್ತರ ಮತಕ್ಷೇತ್ರದ ಮತದಾರರ ಬಾಂಧವರಿಗೆ ಅನಂತ ಧನ್ಯವಾದಗಳು ತಿಳಿಸಿದ್ದಾರೆ. ಕ್ಷೇತ್ರದಲ್ಲಿ ನಮ್ಮ ಕಾಯ೯ಕತ೯ರು ಹಗಲಿರುಳು ಶ್ರಮಿಸಿದ್ದು,ಅವರಿಗೆ ಆಭಾರಿಯಾಗಿದ್ದೆನೆ ಎಂದರು.

ಈ ಚುನಾವಣೆಯಲ್ಲಿ ನಾವು ಸರಿಸುಮಾರು 5000 ಮತಗಳಿಂದ ಗೆಲ್ಲಬೇಕಾಗಿತ್ತು.ಆದರೆ, ನಾವು ನಮ್ಮವರಿಂದಲೇ ಸೋಲು ಅನುಭವಿಸುವ ಪ್ರಸಂಗ ಎದುರಾಯಿತು ಎಂದ ಅವರು, ಸೋಲು ಸೋಲೆ,ಹೀಗಾಗಿ ಅದನ್ನು ನಾವು ಒಪ್ಪಿಕೊಳ್ಳಬೇಕಾಗುತ್ತದೆ ಎಂದರು.

ಉತ್ತರ ಕ್ಷೇತ್ರದ ಪ್ರತಿ ಬೂತ್ ನಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ಚಲಾವಣೆ ಆಗಿವೆ.ಕಾಂಗ್ರೆಸ್ನವರ ಮಾತುಗಳನ್ನು ಕೇಳಿಕೊಂಡು ನಮ್ಮವರೇ ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ತಮ್ಮ ನೋವನ್ನು ತೋಡಿಕೊಂಡರು.

ಕಳೆದ ಐದು ವರ್ಷಗಳ ಅವಧಿಯಲ್ಲಿ ಅಧಿಕಾರ ಇಲ್ಲದಿದ್ದರೂ, ಉತ್ತರ ಕ್ಷೇತ್ರದ ವ್ಯಾಪ್ತಿಯಲ್ಲಿ ಸರಿಯಾಗಿ 105 ಕೋಟಿ ಹಣದ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ ಎಂದ ಅವರು,ಸೋಲೆ ಕೊನೆಯಲ್ಲ.ಮತ್ತೆ ಮತ್ತೆ ಅವಕಾಶ ಬರುತ್ತಾ ಇರುತ್ತದೆ ಎಂದರು.

ಕಲಬುರಗಿ ಉತ್ತರ ಕ್ಷೇತ್ರ ಕಾಂಗ್ರೆಸ್ ಶಾಸಕರ ಅವಧಿಯಲ್ಲಿ ಅಭಿವೃದ್ಧಿ ಹೊಂದಲಿ ಎಂದು ಬಯಸುತ್ತೇನೆ.ಕಲಬುರಗಿ ಉತ್ತರ ಕ್ಷೇತ್ರದ ಜನರಿಗೆ, ಬಡವರಿಗೆ ಹಾಗೂ ನಿರುದ್ಯೋಗ ಯುವಕರಿಗೆ ಉದ್ಯೋಗ ಸಿಗುವಂತಾಗಲಿ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!