Monday, March 27, 2023

Latest Posts

VIRAL VIDEO | ಕಣ್ಣಾಮುಚ್ಚಾಲೆ ತಂದ ಫಜೀತಿ, ಬಾಂಗ್ಲಾದೇಶದಲ್ಲಿ ಅಡಗಿದ್ದ ಹುಡುಗ ಸಿಕ್ಕಿದ್ದು ಮಲೇಷ್ಯಾದಲ್ಲಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಕ್ಕಳ ಆಟಗಳು ಕೆಲವೊಮ್ಮೆ ತೊಂದರೆಯಾಗಿ ಬದಲಾಗುತ್ತವೆ. ಆಟದ ಭರದಲ್ಲಿ ಬಿದ್ದು ಗಾಯಮಾಡಿಕೊಳ್ಳೋದು, ಪಟಾಕಿ ಹಚ್ಚೋಕೆ ಹೋಗಿ ಕಣ್ಣಿಗೆ ಗಾಯ, ಸೊಂಪಿಗೆ ಬೀಳೋದು ಹೀಗೆ ಜೀವಕ್ಕೇ ಕುತ್ತು ತರುವ ಆಟಗಳೂ ಇವೆ. ಇದೇ ರೀತಿ ಬಾಂಗ್ಲಾದೇಶದಲ್ಲಿ ಮಕ್ಕಳ ಆಟ ಹೊಸ ತಿರುವನ್ನೇ ಪಡೆದುಕೊಂಡಿದೆ.

ಬಾಂಗ್ಲಾದೇಶದಲ್ಲಿ 15 ವರ್ಷದ ಬಾಲಕ ಫಹೀಮ್ ಕಣ್ಣಾಮುಚ್ಚಾಲೆ ಆಟದಲ್ಲಿ ಗೆಲ್ಲೋಕೆ ಹೋಗಿ ಶಿಫ್ಟಿಂಗ್ ಕಂಟೇನರ್‌ನಲ್ಲಿ ಬಚ್ಚಿಟ್ಟುಕೊಂಡಿದ್ದಾನೆ. ಒಳಗಿನಿಂದ ಬೀಗ ಹಾಕಿಕೊಂಡು ನಾನು ಯಾರ ಕೈಗೂ ಸಿಗಲಾರೆ ಎಂದು ನೆಮ್ಮದಿಯಾಗಿ ಕುಳಿತುಬಿಟ್ಟಿದ್ದಾನೆ.

ಯಾರೂ ಆತನನ್ನು ಹುಡುಕೋಕೆ ಬರದೇ ಅಲ್ಲೇ ನಿದ್ದೆ ಹೋಗಿದ್ದಾನೆ. ಎಚ್ಚರ ಆದಾಗ ಕಂಟೇನರ್ ಚಲಿಸುತ್ತಿದೆ. ಆತ ಬಾಂಗ್ಲಾದೇಶ ತೊರೆದು ಮಲೇಷ್ಯಾದತ್ತ ಸಾಗುತ್ತಿದ್ದ.

ಒಟ್ಟಾರೆ ಆರು ದಿನಗಳು ಹಗಲು ರಾತ್ರಿ ಅರಿಯದೇ, ಊಟ, ನೀರು ಇಲ್ಲದೆ ೨,೩೦೦ ಕಿ.ಮೀ ಚಲಿಸಿದ್ದಾನೆ. ಮಲೇಷ್ಯಾದಲ್ಲಿ ಆತ ಸಿಕ್ಕಿದ್ದು, ನೀರು,ಊಟ ಇಲ್ಲದೆ ಜ್ವರದಿಂದ, ಸುಸ್ತಿನಿಂದ ಬಳಲಿದ್ದಾನೆ. ರಕ್ಷಣಾ ಸಿಬ್ಬಂದಿ ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮಾನವ ಕಳ್ಳಸಾಗಾಣಿಕೆ ಎಂದು ಪೊಲೀಸರು ಅನುಮಾನಿಸಿದ್ದರು, ಆದರೆ ಬಾಲಕನ ವಿಚಾರಣೆ ನಂತರ ಅಸಲಿ ವಿಷಯ ತಿಳಿದುಬಂದಿದೆ. ಏನೇ ಆಗಲಿ ಮಕ್ಕಳು ಎಷ್ಟು ದೊಡ್ಡವರು ಎಂದುಕೊಂಡರು ಸದಾ ಮಕ್ಕಳ ಮೇಲೆ ನಿಗಾ ಇಟ್ಟಿರಬೇಕು ಅನ್ನೋದಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ.

Fahim, a 15-year-old boy from Bangladesh chose a shipping container as a hiding spot while playing hide & seek with his friends. He fell asleep & was found 6 days later in a Malaysian port. from Damnthatsinteresting

 

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!