ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಹೆಸರಿನಲ್ಲಿ ನಕಲಿ ಇ-ಮೇಲ್ ಖಾತೆ ಸೃಷ್ಟಿಯಾಗಿದ್ದು, ಲಕ್ಷಾಂತರ ರೂಪಾಯಿಗೆ ಮೇಲ್ ಮೂಲಕ ಬೇಡಿಕೆ ಇಡಲಾಗಿದೆ.
ಬಿಎಂಟಿಸಿ ಕೇಂದ್ರ ಕಚೇರಿಯ ಮುಖ್ಯ ಲೆಕ್ಕಾಧಿಕಾರಿ ಆರ್ಥಿಕ ಸಲಹೆಗಾರರ ಇ-ಮೇಲ್‌ಗೆ ಫೇಕ್ ಮೇಲ್ ಬಂದಿದ್ದು, 9 ಲಕ್ಷದ 70 ಸಾವಿರ ರೂಪಾಯಿ ಬಿಲ್ ಪಾವತಿ ಮಾಡುವಂತೆ ಹೇಳಲಾಗಿದೆ.
ಈಗಾಗಲೇ ಸೈಬರ್ ವಂಚಕರ ವಿರುದ್ಧ ದೂರು ದಾಖಲಿಸಲಾಗಿದೆ. ಈ ಬಗ್ಗೆ ಆರ್ಥಿಕ ಸಲಹೆಗಾರರಾದ ಅಬ್ದುಲ್ ಖದ್ದೂಸ್ ಸಚಿವ ರಾಮಲಿಂಗಾರೆಡ್ಡಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಾವು ಯಾವುದೇ ಮೇಲ್ ಕಳಿಸಿಲ್ಲ ಎಂದು ಸಚಿವರಿಂದ ಸ್ಪಷ್ಟನೆ ದೊರೆತಿದೆ.